Homeಪ್ರಮುಖ ಸುದ್ದಿ

13 ತಿಂಗಳಲ್ಲಿ 9 ಮಹಿಳೆಯರ ಹತ್ಯೆ: ಸೆಕ್ಸ್ ಗೆ ಪೀಡಿಸುತ್ತಿದ್ದ ಸೈಕೋ ಕಿಲ್ಲರ್ ಬಂಧನ

ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಕಳೆದ 13 ತಿಂಗಳಲ್ಲಿ 9 ಮಹಿಳೆಯರನ್ನು ಹತ್ಯೆಗೈದ ಖತರ್ನಾಕ್ ‘ಸೈಕೋ ಕಿಲ್ಲರ್’ ನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ವಿವರಣೆಗಳ ಆಧಾರದ ಮೇಲೆ ಪೊಲೀಸರು ಮೂವರು ಶಂಕಿತರ ರೇಖಾಚಿತ್ರವನ್ನು ಬಿಡುಗಡೆ ಮಾಡಿದ ಮೂರು ದಿನಗಳ ನಂತರ ಈ ಬಂಧನ ನಡೆದಿದೆ. ಬಂಧಿತ ಸೈಕೋ ಕಿಲ್ಲರ್ ಆರೋಪಿಯನ್ನು ಬರೇಲಿಯ ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಕುಲದೀಪ್ ಎಂದು ಗುರುತಿಸಲಾಗಿದೆ.

ಬರೇಲಿಯ ವಿವಿಧ ಭಾಗಗಳಲ್ಲಿ ನಡೆದ ಮಹಿಳೆಯ ಕೊಲೆಗಳಲ್ಲಿ ಒಂದೇ ಮಾದರಿಯನ್ನು ಪೊಲೀಸರು ಗಮನಿಸಿದಾಗ ಈ ಪ್ರಕರಣವು ಮೊದಲು ಬೆಳಕಿಗೆ ಬಂದಿತು. ಕಳೆದ 13 ತಿಂಗಳುಗಳಲ್ಲಿ 40 ರಿಂದ 65 ವರ್ಷ ವಯಸ್ಸಿನ 9 ಮಹಿಳೆಯರು ಒಂದೇ ರೀತಿಯ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಶಾಹಿ, ಶೀಶ್‌ಗಢ್ ಮತ್ತು ಶೇರ್‌ಗಢ್ ಪ್ರದೇಶಗಳಲ್ಲಿ ಕೊಲೆಗಳು ನಡೆದಿವೆ. ಕೊಲೆಯಾದ ಮಹಿಳೆಯರ ಶವಗಳು ಕಬ್ಬಿನ ಗದ್ದೆಗಳಲ್ಲಿ ಕಂಡುಬಂದಿತ್ತು. ಅವರ ಬಟ್ಟೆಗಳು ಅಸ್ತವ್ಯಸ್ತ ಸ್ಥಿತಿಯಲ್ಲಿದ್ದರೂ ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆ್ ಕಂಡುಬಂದಿರಲಿಲ್ಲ. ಎಲ್ಲಾ ಪ್ರಕರಣಗಳನ್ನು ಅವಲೋಕಿಸಿದಾಗ ಮಹಿಳೆಯರು ಧರಿಸಿದ್ದ ಸೀರೆಗಳನ್ನೇ ಬಳಸಿ ಕತ್ತು ಹಿಸುಕಿದ್ದು ಎಲ್ಲಾ ಕೊಲೆಯಲ್ಲಿ ಸಾಮ್ಯತೆ ಕಂಡುಬಂದಿತ್ತು.

ಸರಣಿ ಹಂತಕನನ್ನು ಪತ್ತೆಹಚ್ಚಲು ಬರೇಲಿ ಪೊಲೀಸರು “ಆಪರೇಷನ್ ತಲಾಶ್” ಪ್ರಾರಂಭಿಸಿ, ಒಟ್ಟು 22 ವಿಶೇಷ ತಂಡಗಳನ್ನು ರಚಿಸಿದ್ದರು.ಅಲ್ಲಿ ಪೊಲೀಸರು ಸರಿಸುಮಾರು 1,500 ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಶೋಧಿಸಿದ್ದರು. 1.5 ಲಕ್ಷ ಮೊಬೈಲ್ ಸಂಖ್ಯೆ ಪರಿಶೀಲಿಸಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ 600 ಕ್ಯಾಮೆರಾಗಳನ್ನು ಸ್ಥಾಪಿಸಿದರು. ಪೊಲೀಸರನ್ನು ರೈತರು ಮತ್ತು ಸ್ಥಳೀಯರ ಸೋಗಿನಲ್ಲಿ ನಿಯೋಜಿಸಲಾಗಿತ್ತು.ಬಾಡಿಕ್ಯಾಮೆರಾಗಳು ಮತ್ತು ಗುಪ್ತ ಕಣ್ಗಾವಲು ಸಾಧನಗಳೊಂದಿಗೆ ಪರಿಸರದಲ್ಲಿ ಬೆರೆಯುತ್ತಿದ್ದರು.

ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಅನುಮಾನದಿಂದ ಕುಲದೀಪ್ ಎಂಬಾತನನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಈ ವೇಳೆ ತಾನು ಮಹಿಳೆಯರನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಮಹಿಳೆಯರನ್ನ ಸೆಕ್ಸ್ ಗೆ ಪೀಡಿಸುತ್ತಿದ್ದ ಸೈಕೋ ಒಪ್ಪದಿದ್ದಾಗ ಅವರನ್ನು ಸೀರೆಯಿಂದ ಬಿಗಿದು ಕೊಲೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button