ಪ್ರಮುಖ ಸುದ್ದಿ
ಆಗಸ್ಟ್ ದಿಂದ ಡಿಸೆಂಬರೊಳಗೆ 216 ಕೋಟಿ ಡೋಸ್ ಲಸಿಕೆ ಲಭ್ಯ: ಕೇಂದ್ರ ಸರ್ಕಾರ
216 ಕೋಟಿ ಡೋಸ್ ಲಸಿಕೆ ಲಭ್ಯ: ಕೇಂದ್ರ ಸರ್ಕಾರ
ನವದೆಹಲಿಃ ಆಗಸ್ಟ್ ದಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ ಕೋವಿಡ್ ಲಸಿಕೆ ಸುಮಾರು 216 ಕೋಟಿ ಡೋಸ್ ಗಳು ಲಭ್ಯವಾಗಲಿದೆ. ದೇಶ ನಿವಾಸಿಗಳಿಗೆಲ್ಲರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ.
ಸದ್ಯ ಮುಂದಿನ ವಾರ ರಷ್ಯಾದಿಂದ “ಸ್ಪುಟ್ನಿಕ್ ವಿ” ಲಸಿಕೆ ಬರಲಿದೆ. ಅಲ್ಲದೆ ಮುಂದಿನ ವರ್ಷದ ತ್ರೈಮಾಸಿಕ ವೇಳೆಗೆ ದೇಶದಲ್ಲಿಯೇ 300 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಕೋವಿಶೀಲ್ಡ್ ಲಸಿಕೆ 75 ಕೋಟಿ ಡೋಸ್ ಮತ್ತು ಕೋವ್ಯಾಕ್ಸಿನ್ ಲಸಿಕೆ 30 ಕೋಟಿ ಡೋಸ್ ಗಳನ್ನು ಬಯೋಲಾಜಿಕಲ್ ಇ-ಕಂಪನಿ ಉತ್ಪಾದಿಸಲಿದೆ. ಹಾಗೂ ಝೈಡಸ್ – ಕ್ಯಾಡಿಲಾ ಕಂಪನಿ 5 ಕೋಟಿ ಡೋಸ್, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ 20 ಕೋಟಿ ಡೋಸ್ ಉತ್ಪಾದಿಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.