ಕಾವ್ಯ

“ವಚನಗಳ‌ ಪರಿಣಾಮ” ಕವಿ ಬಡಿಗೇರ ರಚಿತ ಕಾವ್ಯ

ವಚನಗಳು
——————-

ಚನಗಳು ತಿಳಿದರೆ
ಪ್ರವಚನಗಳು ಬೇಕಿಲ್ಲ
ವಚನಗಳು ಅರಿತರೆ
ಆಚಾರಗಳು ಬೇಕಿಲ್ಲ

ವಚನಗಳೇ ಶಿವಚಾರ
ವಚನಗಳೇ ಸದಾಚಾರ

ವಚನವೆಂದರೆ
ವಿವೇಚನೆಗಳ ಶೃಂಗಾರ
ವಚನವೆಂದರೆ
ಚಿಂತನೆಗಳಿಗೆ ಆಧಾರ

ವಚನವೆಂದರೆ
ಅಂತರಂಗದ ನಿಜ ಸಾರ
ವಚನವೆಂದರೆ
ಮನುಕುಲಕೆ ಮುಕುಟ ಹಾರ

ವಚನವೆಂದರೆ
ತತ್ವಪ್ರತಿಪಾದನೆಗಳಶೃತಿಸಾರ
ವಚನವೆಂದರೆ
ಮಾನವ ಕುಲವೊಂದೇನ್ನುವ
ಮಮಕಾರ….

ವಚನವೆಂದರೆ
ನಂಬಿಕೆಗಳ ತವರೂರು
ವಚನವೆಂದರೆ
ಮಾತೃ ಹೃದಯದ ಶೃತಿಲಯ
ವಚನವೆಂದರೆ
ಭಕ್ತಿಯೆ ಭಂಡಾರದ ಆಲಯ

ವಚನವೆಂದರೆ
ಅಂತರಗ ಶುದ್ಧಿ ಬಹಿರಂಗ
ಶುದ್ಧಿ…ನಿಜ ನುಡಿ ಆಧಾರ

ವಚನವೆಂದರೆ
ಜಗದ ಹೊಳಪು
ವಚನವೆಂದರೆ
ಜೀವನದ ಬೆಳಕು

ವಚನವೆಂದರೆ
ನಡೆ ನುಡಿಗಳ ಸಿಂಧೂರ

ವಚನಗಳೆ
ಜಗದ ಸತ್ಯ ಮಿತ್ಯಗಳು
ವಚನಗಳೆ
ಬದುಕಿಗೆ ದಾರಿ ದೀಪಗಳು

ವಚನಗಳಿಲ್ಲದೆ
ತತ್ವಗಳಿಲ್ಲ
ವಚನಗಳಿಲ್ಲದೆ
ಸಿದ್ದಾಂತಗಳಿಲ್ಲ
ವಚನಗಳಿಲ್ಲದೆ
ಚಿಂತನೆಗಳಿಲ್ಲ
ವಚನಗಳಿಲ್ಲದೆ
ಚೈತನ್ಯವಿಲ್ಲ

ವಚನವೆಂದರೆ
ಅಂತಃಕರುಣೆಯ ಕಡಲು
ವಚನವೆಂದರೆ
ಮಾತೃ ಭಾಷೆಯ ಒಡಲು
ವಚನವೆಂದರೆ
ಸಮತೆ ಕ್ಷಮತೆಗಳ ಮಡಿಲು

ವಚನವೆಂದರೆ
ಗುಡಿ ಗೋಪುರಗಳಲ್ಲ
ವಚನವೆಂದರೆ
ಘಂಟೆ ಜಾಗಟೆ ತಮಟೆಗಳ
ನಾದವಲ್ಲ
ವಚನವೆಂದರೆ
ಅಹಂಕಾರವಲ್ಲ ಆಕಾರವಲ್ಲ
ನಿರಾಕರವೇ ಎಲ್ಲ

ವಚನವೆಂದರೆ
ಅಂತಃರಂಗದ ಗುಡಿಯಲ್ಲೊಂದು ದೀವಿಗೆ

ವಚನವೆಂದರೆ
ಅಂತಃಶಕ್ತಿಗೆ ಮುನ್ನುಡಿ
ಅತ್ಮ ಸಾಕ್ಷಿಗೆ ಕೈಗನ್ನಡಿ

ಗಂಗಾಧರ.ಎಂ.ಬಡಿಗೇರ

Related Articles

2 Comments

  1. ಅದ್ಬುತ ಬರಹ ಸರ್… ನಿಮ್ಮ ಬರವಣಿಗೆ ಓದುಗರನ್ನು ಚಿಂತನಾಶೀಲರನ್ನಾಗಿ ಮಾಡುತ್ತದೆ… ಉತ್ತಮ ಪದ ಪ್ರಯೋಗಗಳು ಸರ್…

Leave a Reply

Your email address will not be published. Required fields are marked *

Back to top button