ಸಂಬಳ ಕಡಿಮೆ ಮಾಡಿ – ಸಂಬಂಧಿಸಿದ ಅಧಿಕಾರಿಗಳಿಗೆ ಲೆಟರ್ ಬರೆದವರಾರು.?
ಸಂಬಳ ಕಡಿಮೆ ಮಾಡಿ ಎಂದು ಲೆಟರ್ ಬರೆದಿದ್ದ ಆ ಪುಣ್ಯಾತ್ಮ ಯಾರು..? ಓದಿ
ದಿನಕ್ಕೊಂದು ಕಥೆ
ಸಂಬಳ ಕಡಿಮೆ ಮಾಡಿ
ಒಂದು ದಿನ ಒಬ್ಬ ಮಗ ತನ್ನ ತಂದೆಯ ಹತ್ತಿರ ಬಂದು “ಅಪ್ಪ ನನಗೆ ಒಂದು ಬೈಕ್ ಕೊಡಿಸಿ” ಎಂದು ಕೇಳಿದ. ಆಗ ತಂದೆ “ಮಗನೆ ಸರ್ಕಾರ ಕೊಡುವ ಹಣದಿಂದ ನಾವು ಹೊಟ್ಟೆ ತುಂಬಿಸಿಕೊಳ್ತಾ ಇದೀವಿ. ಹೀಗಿರುವಾಗ ನಿನಗೆ ಬೈಕ್ ಕೊಡಿಸುವಷ್ಟು ಹಣ ನನ್ನ ಹತ್ತಿರ ಇಲ್ಲ” ಎಂದರು.
ಆಗ ಮಗ ಬೇಜಾರು ಮಾಡಿಕೊಂಡು ತನ್ನ ತಾಯಿಗೆ ಬಳಿ ಹೋಗಿ ವಿಷಯವನ್ನು ತಿಳಿಸಿದ. ಆಗ ತಾಯಿ ತನ್ನಲ್ಲಿರುವ ಹಣದಿಂದ ಒಂದು ಬೈಕ್ ಕೊಡಿಸಿದರು. ಈ ವಿಚಾರವನ್ನು ಕಂಡು ತಂದೆಗೆ ಅಚ್ಚರಿಯಾಗಿ ತಮ್ಮ ಪತ್ನಿಗೆ “ನನ್ನ ಹತ್ತಿರ ಹಣವೇ ಇರಲಿಲ್ಲ. ಆದರೆ ಒಂದು ಬೈಕ್ ಕೊಡಿಸುವಷ್ಟು ಹಣ ನಿನ್ನಲ್ಲಿ ಹೇಗೆ ಬಂತು?” ಎಂದು ಕೇಳಿದರು. ಆಗ ಪತ್ನಿ “ನೀವು ಮನೆಯ ಖರ್ಚಿಗಾಗಿ ಕೊಡುತ್ತಿದ್ದ ಹಣದಲ್ಲಿ ಅಲ್ಪ ಸ್ವಲ್ಪ ಉಳಿಸುತ್ತಿದೆ. ಆ ಹಣದಿಂದಲೇ ಮಗನಿಗೆ ಬೈಕ್ ಕೊಡಿಸಿದೆ” ಎಂದು ಹೇಳಿದರು.
ಮರುದಿನವೇ ಅವರು ಸರ್ಕಾರಕ್ಕೆ ಒಂದು ಪತ್ರವನ್ನು ಬರೆದರು, “ಸರ್ಕಾರ ನನಗೆ ನೀಡುತ್ತಿರುವ ಸಂಬಳ ನನ್ನ ಕುಟುಂಬದ ಖರ್ಚಿಗೆ ವಿನಿಯೋಗವಾಗಿ ಇನ್ನೂ ಹೆಚ್ಚಿಗೆ ಉಳಿಯುತ್ತಿದೆ. ದಯವಿಟ್ಟು ಆ ಹೆಚ್ಚಿನ ಹಣವನ್ನು ತನ್ನ ಸಂಬಳದಿಂದ ಕಡಿಮೆ ಮಾಡಿ” ಎಂದು ಆ ಪತ್ರದಲ್ಲಿ ತಿಳಿಸಿದರು.
ಅವರು ಯಾರು ಗೊತ್ತೇ? ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ, 1964ರಲ್ಲಿ ಭಾರತದ ಪ್ರಧಾನಮಂತ್ರಿಯಾದ ಹೆಮ್ಮೆಯ ನಾಯಕ, ಲಾಲ್ ಬಹದ್ದೂರ್ ಶಾಸ್ತ್ರಿಯವರು.
ನೀತಿ :– ಇಂದಿನ ಕಾಲದಲ್ಲಿ ಜನರು ತಾನು ಹಣ ತಿಂದು ಸಾಕಾಗಿ ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಇನ್ನೂ ಜಾಸ್ತಿ….. ಅಲ್ಲಿಯವರೆಗೂ ಬೇಕಾಗುವ ಹಣವನ್ನು ಕುಡಿಡುತ್ತಾರೆ. ಆದರೆ ಶಾಸ್ತ್ರೀಜಿಯವರು ಹಾಗೆ ಮಾಡಲಿಲ್ಲ. ಅಂತಹ ನಾಯಕನ ಆಯ್ಕೆಮಾಡಿ ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಕೊಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.