ಸಿಎಂ BSY ಭೇಟಿಯಾದ ಅವಧೂತ ವಿನಯ ಗುರೂಜಿ
ಸಿಎಂ BSY ಭೇಟಿಯಾದ ಅವಧೂತ ವಿನಯ ಗುರೂಜಿ ಏನಂತಾರೆ.?
ಬೆಂಗಳೂರಃ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅವಧೂತರಂತಲೆ ಖ್ಯಾತಿ ಪಡೆದ ವಿನಯ್ ಗುರೂಜಿ ಬೆಂಗಳೂರಿನ ಗೃಹ ಕಛೇರಿ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಕರೊನಾ ನಿಯಂತ್ರಣದ ಬಗ್ಗೆ ವಿನಯ್ ಗುರೂಜಿಗಳು ಸರ್ಕಾರಕ್ಕೆ ಸಲಹೆ ನೀಡಿದರು. ಕೋವಿಡ್ ಮೂರನೇ ಅಲೆ ಬಗ್ಗೆ ಸರ್ಕಾರ ಈಗಿನಿಂದಲೇ ಎಚ್ಚರಿಕೆ ವಹಿಸಬೇಕು. ಜಿಲ್ಲಾವಾರು ಆರೋಗ್ಯ ಕೇಂದ್ರಗಳಲ್ಲಿ ಆಸ್ಪತ್ರೆಗಳನ್ನ ಮೇಲ್ದರ್ಜೆಗೇರಿಸಬೇಕಾಗಿದೆ. ರಾಜ್ಯದಲ್ಲಿ ಮರಗಳನ್ನು ಕಡಿಯದಂತೆ ನಿಷೇಧ ಕಠಿಣ ಕ್ರಮಕ್ಕೆ ಮುಂದಾಗಬೇಕು.ಅಲ್ಲದೆ ನೀಲಗಿರಿ ಮರಗಳ ತೆರವಿಗೆ ಸರ್ಕಾರ ಮುಂದಾಗಬೇಕು.
ಈಗಿನಿಂದಲೇ ವೈದ್ಯರ ನೇಮಕ ಸುಸ್ಸಜಿತ ಆಸ್ಪತ್ರೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ, ಮೂರನೇ ಅಲೆ ತಡೆಯಲು ಸರ್ಕಾರ ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಗೀವ್ ಇಂಡಿಯಾ ಕಂಪನಿಯ ಸಹಕಾರದೊಡೆನೆ, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಕೈಗೊಂಡಿರುವ, ಸೇವಾ ಕಾರ್ಯಗಳ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿ ಗಳ ಜೊತೆ ಚರ್ಚಿಸಿದರು.
ಮುಖ್ಯಮಂತ್ರಿ ಭೇಟಿಯ ನಿಯೋಗದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಹಾಗೂ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಕಾರ್ಯದರ್ಶಿಯಾದ ಎಸಿ ಶಿವರಾಜ್, ಟ್ರಸ್ಟ್ ನ ಸಲಹಾ ಸಮಿತಿ ಸದಸ್ಯರಾದ ರಾಕೇಶ್ ಶೆಟ್ಟಿ, ಶ್ರೀವತ್ಸ ಮತ್ತು ಮಿಥುನ್ ಹಾಜರಿದ್ದರು.