ಶಹಾಪುರ ಲೋಕ ಅದಾಲತ್: 283 ಪ್ರಕರಣಗಳ ಇತ್ಯರ್ಥ

ಶಹಾಪುರ ಲೋಕ ಅದಾಲತ್: 283 ಪ್ರಕರಣಗಳ ಇತ್ಯರ್ಥ
ಶಹಾಪುರ: ಪ್ರಧಾನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿವಿಧ ಸ್ವರೂಪದ 283 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯಾರ್ಥಪಡಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ ವಿ ಪಾಟೀಲ್ ಹಾಲಬಾವಿ ತಿಳಿಸಿದ್ದಾರೆ.
ಪ್ರಧಾನ ಸಿವಿಲ್ ನ್ಯಾಯಾಲದಲ್ಲಿ ಅಸಲು ದಾವೆ 8, ಚೆಕ್ ಬೌನ್ಸ್ನ್ 24 ಪ್ರಕರಣಗಳನ್ನು ಇತ್ಯಾರ್ಥಪಡಿಸಿ $61.24ಲಕ್ಷ ಅರ್ಜಿದಾರರಿಗೆ ವಾಪಸ್ಸು ಕೊಡಿಸಲಾಗಿದೆ. ಅಲ್ಲದೆ ಇನ್ನಿತರ ವಿವಿಧ ಸ್ವರೂಪದ 111 ಗಳನ್ನು ಸೇರಿದಂತೆ 145 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಗಿದೆ.
ಅಲ್ಲದೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದ 139 ಪ್ರಕರಣಗಳನ್ನು ಇತ್ಯಾರ್ಥಗೊಂಡಿವೆ ಎಂದು ಅವರು ಮಾಹಿತಿ ನೀಡಿದರು. ಮತ್ತು ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ 2 ಪ್ರಕರಣ ಇತ್ಯಾರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಸಂಧಾನಕಾರಾಗಿ ಶರಣಪ್ಪ ಹೊಸ್ಮನಿ ಅವರನ್ನು ನೇಮಿಸಲಾಗಿತ್ತು. ಸಂಘದ ಕಾರ್ಯದರ್ಶಿ ಎಸ್.ಎಂ.ಸಜ್ಜನ, ಹಿರಿಯ ವಕೀಲರಾದ ಎಸ್.ಶೇಖರ, ಆರ್.ಎಂ.ಹೊನ್ನಾರಡ್ಡಿ, ಮಲ್ಕಪ್ಪ ಪಾಟೀಲ್ ಕನ್ಯಾಕೊಳ್ಳೂರ, ಯೂಸೂಫ್ ಸಿದ್ದಕಿ, ಟಿ.ನಾಗೇಂದ್ರ, ಗುರುರಾಜ ಪಡಶೆಟ್ಟಿ, ಸಿದ್ದೂ ಪಸ್ಪೂಲ್, ಸಂದೀಪ ದೇಸಾಯಿ, ಮಲ್ಲಪ್ಪ ಪೂಜಾರಿ, ರಾಕೇಶ ಸಾಹು, ಲಕ್ಷ್ಮಿನಾರಾಯಣ ಕುಲಕರ್ಣಿ, ಶ್ರೀಮಂತ ಕಂಚಿ, ದೇವರಾಜ ಚೆಟ್ಟಿ, ಹೈಯಾಳಪ್ಪ ಹೊಸ್ಮನಿ, ಶರಣರಾಜ್ ಮುದನೂರ, ವಾಸುದೇವ ಕಟ್ಟಿಮನಿ, ನಾಗೇಂದ್ರ ಬಳಬಟ್ಟಿ, ವಿನೋದ ದೊರೆ, ಬಸಮ್ಮ ರಾಂಪುರೆ, ಜಯಲಕ್ಷ್ಮಿ ಬಸರಡ್ಡಿ, ಸತ್ಯಮ್ಮ ಹೊಸ್ಮನಿ ಇದ್ದರು.