ಕಥೆ

ನಿಮ್ಮ ಯೋಚನೆ ಸಕರಾತ್ಮಕವಾಗಿರಲಿ..ಈ ಕಥೆ ಓದಿ

ಸ್ಟ್ರೆಂತ್ ಈಸ್ ಲೈಫ್ ವೀಕ್ ನೆಸ್ ಈಸ್ ಡೆತ್ - ವಿವೇಕರ ವಾಣಿ

ದಿನಕ್ಕೊಂದು ಕಥೆ – ವಿವೇಕರ‌ ವಾಣಿ

ಸ್ವಾಮಿ ವಿವೇಕಾನಂದ ಎಂದಾಕ್ಷಣ ಮೊದಲು ಅವರ ದೇಶ ಭಕ್ತಿಯೇ ನೆನಪಾಗಬೇಕು ನಮಗೆಲ್ಲ…

ಸ್ವಾಮಿ ವಿವೇಕಾನಂದರು ಎಂತಹ ಮಹಾನ್ ದೇಶಭಕ್ತರೆಂದರೆ ಅವರ ಬಗ್ಗೆ ನಕಾರಾತ್ಮಕವಾಗಿ ಯಾರೊಬ್ಬನು ಮಾತನಾಡಲಾಗದು, ಅವರ ಜೀವನವೇ ಒಂದು ತರಹ ವಿಸ್ಮಯಕಾರಿಯಾಗಿದ್ದು ಅವರು ಅಮೇರಿಕಾಕ್ಕೆ ಹೋದದ್ದು ಭಿಕ್ಷೆ ಬೇಡಿ ಸಂಪಾದಿಸಿದ ಹಣದಲ್ಲಿ..! ಅವರು ಅಮೇರಿಕಾಗೆ ಹೋದಾಗ ಅಲ್ಲಿ ದಾರಿಯಲ್ಲಿ ನಡೆದು ಹೋಗುವಾಗ ಅವರಿಗೆ ಒಬ್ಬ ಹೆಣ್ಣು ಸಿಕ್ಕಿ ಕೇಳಿದರು ಸ್ವಾಮಿ ಎಲ್ಲಿಂದ ಬಂದಿದ್ದೀರಿ ಯಾವ ಕಡೆಗೆ ಹೋಗುವವರಿದ್ದೀರಿ ಎಂದು ಅದಕ್ಕೆ ಅವರು ನಾನು ವಿಶ್ವಧರ್ಮ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ ಎಂದರು.

ಆಗ ಆ ಹೆಣ್ಣು ನಿಮಗೆ ಪರಿಚಯದವರು ಇಲ್ಲಿ ಯಾರು ಇಲ್ಲವೆ? ಎಂದು ಪ್ರಶ್ನಿಸಿದಾಗ ವಿವೇಕಾನಂದರು ಹೇಳಿದರು.. ಯಾಕಿಲ್ಲ ಇದ್ದಾರಲ್ಲ ಪರಿಚಯಸ್ತರು ಅಂತ ನೀವು ಎಂದರಂತೆ ಅವರ ಮಾತಿನ ಶಕ್ತಿಯ ಮುಂದೆ ಎಂತೆಂತಹ ಮಹಾನ್ ವ್ಯಕ್ತಿಗಳೇ ಇವರನ್ನು ಪ್ರಶಂಸಿಸಿದ್ದರು.

ಒಮ್ಮೆ ಅವರು ತಂಗಿದ್ದ ಮನೆಗೆ ಅಮೇರಿಕಾದ ಕೇಂಬ್ರಿಡ್ಜ್ ಯೂನಿವರ್ಸಿಟಿ ಯ ಪ್ರಾಂಶುಪಾಲರಾದ ರೈಟ್ ಎಂಬ ಒಬ್ಬ ಮಹಾನ್ ಧರ್ಮ ಚಿಂತಕ ಅಲ್ಲಿಗೆ ಬರುತ್ತಾರೆ. ಹೋಗುವ ಮೊದಲು ಆ ಮನೆಯವರು ಭಾರತದಿಂದ ಸಂತರೊಬ್ಬರು ವಿಶ್ವಧರ್ಮ ಸಮ್ಮೇಳನಕ್ಕೆ ಬಂದಿದ್ದಾರೆ ಅವರನ್ನ ಮಾತನಾಡಿಸಿ ಎಂದಾಗ ಅವರು ಭಾರತದವರ ಬಳಿ ನಾವು ಮಾತನಾಡುವುದೇ ಬೇಡ ಎಂದು ಹೊರಟಿದ್ದರಂತೆ ಕೊನೆಗೆ ಮನೆಯವರ ಒತ್ತಾಯದ ಮೇರೆಗೆ ಮಾತನಾಡಿಸಿದರಂತೆ.

ಅವರ ಬಳಿ ಮಾತನಾಡಲು ಕುಳಿತ ಈ ಚಿಂತಕ ಸತತವಾಗಿ ನಾಲ್ಕು ದಿನಗಳ ಕಾಲ ಮಾತನಾಡಿದ್ದರಂತೆ ! ಕೊನೆಗೆ ವಿವೇಕಾನಂದರು ನಿಮ್ಮಿಂದ ಒಂದು ಸಹಾಯವಾಗಬೇಕು ಎಂದರಂತೆ ಏನೆಂದು ಕೇಳಿದಾಗ ವಿಶ್ವಧರ್ಮ ಸಮ್ಮೇಳನಕ್ಕೆ ಪರಿಚಯ ಪತ್ರ ನೀವು ಕೊಡಿಸಿದರೆ ಸಹಾಯವಾಗುತ್ತದೆ ಎಂದಾಗ ನಿಮಗೆ ಕೊಡದೆ ಇನ್ಯಾರಿಗೆ ಕೊಡಲಿ ಎಂದಿದ್ದರಂತೆ ಆ ವಿದೇಶಿ ಧರ್ಮಚಿಂತಕ.!

ಆ ನಂತರ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಿ ಕೇವಲ ಎರಡು ನಿಮಿಷದ ಭಾಷಣ ಮಾಡಿದ್ದ ಸ್ವಾಮಿ ವಿವೇಕಾನಂದರ ಮಾತಿನ ಚಾಣಾಕ್ಷತನ ಮತ್ತು ಸನ್ಯಾಸತ್ವದ ಮಹಿಮೆಯನ್ನು ಇಡೀ ಅಮೇರಿಕಾದ ಚಿಕಾಗೋ ನಗರ ಇಂದಿಗೂ ಕೂಡ ಅವರನ್ನು ಪ್ರಶಂಸಿಸುತ್ತಿದೆ ಎಂದರೆ ಆ ಮಾತಿನ ಶಕ್ತಿ ಎಂತಹದ್ದಿರಬಹುದು.!

ಮಾರನೆ ದಿನ ಅಮೇರಿಕಾದ ಮಹಾನ್ ಪತ್ರಿಕೆಗಳು ಕೊಲಂಬಸ್ ಡಿಸ್ಕವರ್ಡ್, ಅಮೇರಿಕನ್ ಸಾಯಿಲ್ ವಿವೇಕಾನಂದ ಡಿಸ್ಕವರ್ಡ್, ಅಮೇರಿಕನ್ ಸೋಲ್ ಎಂದು ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿ ಗೌರವಿಸಿದ್ದವು.

ಅಮೇರಿಕಾದ ಜನರ ಮೇಲೆ ಸ್ವಾಮಿ ವಿವೇಕಾನಂದರು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದರು ಎಂದರೆ‌ ಅಮೇರಿಕಾದ ದೊಡ್ಡ ದೊಡ್ಡ ಚರ್ಚ್ ಗಳು ಅವರ ಭೋದನೆಗೆ ಆಹ್ವಾನ ನೀಡಿದ್ದವು ಒಬ್ಬ ಹಿಂದೂ ಸನ್ಯಾಸಿಯ ಉಪದೇಶಕ್ಕಾಗಿ ಕ್ರಿಶ್ಚಿಯನ್ ಚರ್ಚ್ ಗಳು ಕಾದಿತ್ತು ಎಂದರೆ ಅವರ ಮಾತಿನ ಶಕ್ತಿ ಎಂತಹದ್ದಿರಬಹುದು ಅಲ್ಲವೆ.

ವಿವೇಕಾನಂದರು ಹೇಳುತ್ತಿದ್ದರು “ಯತಾ ಗಚ್ಚತಿ ಸಾಗರಹ” ಅಂದರೆ ಎಲ್ಲಾ ನದಿಗಳು ಹೇಗೆ ಸಮುದ್ರವನ್ನು ಸೇರುತ್ತವೊ ಹಾಗೆ ಎಲ್ಲಾ ಧರ್ಮಗಳು ಕೊನೆಗೆ ಪರಮಾತ್ಮನನ್ನು ಸೇರುತ್ತವೆ‌ ಎಂದು. ಪ್ರಪಂಚದಲ್ಲಿ ಎಲ್ಲರು ನಮ್ಮ ಧರ್ಮ ಶ್ರೇಷ್ಠ ನಾವೇ ಶ್ರೇಷ್ಠರು ಎಂದು ಹೇಳಲು ಬಂದಿದ್ದ ಅಲ್ಲಿನ ಧರ್ಮ ಪ್ರಚಾರಕರಿಗೆ ವಿವೇಕಾನಂದರ ಮಾತುಗಳು ವಿಶೇಷವೆನಿಸಿದ್ದವು.

ನಾನು ಯಾವ ಧರ್ಮವನ್ನು ಸಹಿಸಿಕೊಳ್ಳುವವನಲ್ಲ ಎಲ್ಲಾ ಧರ್ಮವನ್ನು ಒಪ್ಪಿಕೊಳ್ಳುತ್ತೇನೆ ಎಂದಾಗ ಅಲ್ಲಿನ ಧರ್ಮ ಪ್ರಚಾರಕರಿಗೆ ಭಾರತದ ಶಕ್ತಿಯ ಅರಿವಾಗಿತ್ತು.

ವಿವೇಕಾನಂದರು ಹೇಳ್ತಾರೆ ಸ್ಟ್ರೆಂತ್ ಈಸ್ ಲೈಫ್ ವೀಕ್ ನೆಸ್ ಈಸ್ ಡೆತ್ ಒಬ್ಬ ಸಕಾರಾತ್ಮಕವಾಗಿ ಯೋಚಿಸಿದರೆ ಆತ ಎಂತಹ ಮಹಾನ್ ವ್ಯಕ್ತಿಯು ಆಗಬಲ್ಲ ಆದರೆ ನಕಾರಾತ್ಮಕವಾಗಿ ಯೋಚಿಸ ಹೊರಟರೆ ಇದ್ದರೂ ಸತ್ತಂತೆಯೇ ಸರಿ ಎಂದು ಹೇಳುತ್ತಾರೆ.

ಅವರ ಈ ಒಂದು ಮಾತು ಬಹುಶಃ ಎಂತಹ ಮಹಾನ್ ವ್ಯಕ್ತಿಯಾಗಲು ಸ್ಪೂರ್ತಿ ತುಂಬಬಹುದು.”ರೈಸ್ ,ಅವೇಕ್,ಸ್ಟಾಪ್ ನಾಟ್ ಟಿಲ್ ದ ಗೋಲ್ ಈಸ್ ರೀಚ್ಡ್ ಅಂದರೆ ಒಮ್ಮೆ ನಿನ್ನ ಗುರಿ ಸ್ಪಷ್ಟವಾದರೆ ಆ ಗುರಿ ಮುಟ್ಟುವ ತನಕ ನಿಲ್ಲದಿರಲು ಸಂದೇಶ ನೀಡುತ್ತಾರೆ.ಅವರ ಆದರ್ಶವನ್ನು ಪಾಲಿಸಿದ ಅನೇಕರು ಇಂದು ದೊಡ್ಡ ದೊಡ್ಡ ಸಾದನೆ ಮಾಡಿದ ಜ್ವಲಂತ ಉದಾಹರಣೆಗಳಿವೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button