ಪ್ರಮುಖ ಸುದ್ದಿ
ಯಾದಗಿರಿಃ ಡಬಲ್ ಸಂಚೂರಿ ಬಾರಿಸಿದ ಕೊರೊನಾ- ಜಿಲ್ಲೆಯಲ್ಲಿ ಆತಂಕ
ಯಾದಗಿರಿಯಲ್ಲಿ ಡಬಲ್ ಸಂಚೂರಿ ಬಾರಿಸಿದ ಕೊರೊನಾ
ಯಾದಗಿರಿಃ ಇಂದು 60 ಜನರಿಗೆ ಕೊರೊನಾ ಸೋಂಕು ದೃಢ
ಯಾದಗಿರಿಃ ಜಿಲ್ಲೆಯಲ್ಲಿ ಇಂದು ಕೊರೊನಾ ಬಾಂಬ್ ಸ್ಪೋಟವಾಗಿದ್ದು ಸರಿ ಸುಮಾರು 60 ಜನರಿಗೆ ಕೋವಿಡ್ ಸೋಂಕು ಒಕ್ಕರಿಸಿದೆ. 17 ಮಕ್ಕಳು ಸೇರಿದಂತೆ ಒಟ್ಟು 60 ಜನರಿಗೆ ಇಂದು ಸೋಂಕು ದೃಢಪಟ್ಟಿದೆ.
ಜಿಲ್ಲಯ ಸೋಂಕಿತರ ಸಂಖ್ಯೆ 163 ಇದ್ದದ್ದು ಇದೀಗ 223 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ 7 ಸಾವಿರ ಜನರ ವರದಿ ಬರುವ ನಿರೀಕ್ಷೆಯಲ್ಲಿದ್ದು, ಇನ್ನೆಷ್ಟು ಜನರ ದೇಹ ಒಕ್ಕರಿಸಿದೆಯೋ ಎಂಬ ಆತಂಕ ಎದುರಾಗಿದೆ. ಈವರೆಗೆ ಜಿಲ್ಲೆಯಲ್ಲಿ 9 ಜನರು ಗುಣಮುಖ ಹೊಂದಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕ್ವಾರಂಟೈನ್ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡದಿರುವುದೆ ಕಾರಣ ಎನ್ನಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕೇಂದ್ರದಲ್ಲಿ ಸುವ್ಯವಸ್ಥೆ ಇಲ್ಲ. ಕುರಿ ತುಂಬಿದಂತೆ ತುಂಬಿದ್ದು, ಜನರು ಕ್ವಾರಂಟೈನ್ ನಲ್ಲಿರಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.