ಮನರೇಗಾದಡಿ ದುಡಿಯುವ ಕೈಗಳಿಗೆ ಅಕುಶಲ ಕೆಲಸದ ಖಾತರಿ – ಪವಾರ

ಮಹಾತ್ಮ ಗಾಂಧಿ ನರೇಗಾ ಕಾಮಗಾರಿ ವೀಕ್ಷಣೆ
ಯಾದಗಿರಿ- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಒಂದು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ನೂರು ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಲಾಗುತ್ತದೆ ಎಂದು ಯಾದಗಿರಿ ತಾಲ್ಲೂಕ ಪಂಚಾಯತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ ಅವರು ಹೇಳಿದರು.
ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಮಡಿ ತಾಂಡ ಹತ್ತಿರದ ಸರ್ವೆ ನಂಬರ್ 258ರ ಸರಕಾರಿ ಜಮೀನಿನಲ್ಲಿ ಮನರೇಗಾ ಯೋಜನೆಯಡಿ ಮಳೆ ನೀರು ಸಂರಕ್ಷಣೆಗಾಗಿ ಪ್ರಗತಿಯಲ್ಲಿದ್ದ ಗೋ ಕಟ್ಟೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ, ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಹೆಚ್ಚು ಮಾನವ ದಿನಗಳ ಆಧಾರಿತ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾದ ಸಮುದಾಯ ಕಾಮಗಾರಿ ಕೈಗೊಂಡು ಬಹುಕಾಲ ಬಾಳಿಕೆ ಬರುವ ಹೊಸ ಆಸ್ತಿಯ ಸೃಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ನಂತರ ಜನರಿಗೆ ಕೆಲಸವಿಲ್ಲದಾಗ ಕೂಲಿಕಾರರು ಕೆಲಸ ಉಡುಕಿ ದೊಡ್ಡ ನಗರ-ಪಟ್ಟಣಗಳಿಗೆ ಗೂಳೆ ಹೊಗುತ್ತಾರೆ. ಗೂಳೆ ಹೊಗುವದು ತಪ್ಪಿಸಲು ಸರಕಾರ ಗ್ರಾಮ ಪಂಚಾಯತಿ ಇಂದ ಹೆಣ್ಣು-ಗಂಡು ಎಂಬ ತಾರತಮ್ಯ ಮಾಡದೆ ಸಮಾನವಾಗಿ ದುಡಿಯುವ ಜನರಿಗೆ ದಿನಕ್ಕೆ 289 ರೂ.ಗಳ ಕೂಲಿಯಂತೆ, ಅವರು ವಾಸಿಸುವ ಗ್ರಾಮದಲ್ಲೆ ಕೆಲಸ ಕೊಡಲಾಗುತ್ತದೆ ಎಂದು ಹೇಳಿದರು.
ಕೆಲಸ ಮಾಡಲು ಇಚ್ಚಿಸುವ ಜನರು ಕೂಲಿ ಕೆಲಸಕ್ಕಾಗಿ ಅರ್ಜಿ ನಮೂನೆ 6 ಅನ್ನು ಭರ್ತಿ ಮಾಡಿ ತಮಗೆ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದರೆ 15ದಿನದೊಳಗೆ ಕೂಲಿ ಕೆಲಸ ನೀಡಲಾಗುತ್ತದೆ ಎಂದ ಅವರು, ಕೆಲಸ ಪಡೆಯುವದು ನಿಮ್ಮ ಹಕ್ಕು, ಅದನ್ನು ಗ್ರಾಮ ಪಂಚಾಯತಿಗಳಲ್ಲಿ ಕೇಳಿ ಪಡೆಯಿರಿ, ಯಾರೂಬ್ಬರು ಕೂಲಿ ಕೆಲಸ ಅರಸಿ, ನಗರ ಪಟ್ಟಣಗಳಿಗೆ ಗೂಳೆ ಹೊಗಬೇಡಿ ಎಂದು ಕೂಲಿ ಕಾರ್ಮಿಕರಲ್ಲಿ ಮನವಿ ಮಾಡಿದರು.
ಪ್ರಧಾನ ಮಂತ್ರಿಗಳ ಆಶಯದಂತೆ ಮನರೇಗಾ ಯೋಜನೆಯ ಜಲ ಶಕ್ತಿ ಅಭಿಯಾನದಡಿ ಮಳೆ ನೀರು ಹಿಡಿದಿಡುವಿಕೆ (ಅಚಿಣಛಿh ಣhe ಖಚಿiಟಿ ಕ್ಯಾಚ್ ದಿ ರೇನ್ )ಗಾಗಿ ಯರಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಮಡಿ ತಾಂಡದ ಹತ್ತಿರ ನಡೆಯುತ್ತಿರುವ ಗೋ ಕಟ್ಟೆ ನಿರ್ಮಾಣ ಕಾಮಗಾರಿಯಲ್ಲಿ 210 ಜನ ನರೇಗಾ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವದರ ಜೊತೆ, ಜೀವ ಜಲ ಮಳೆ ನೀರನ್ನು ರಕ್ಷಣೆ ಮಾಡಿದಂತಾಗುತ್ತದೆ. ಇದರಿಂದ ಕಾಡು ಪ್ರಾಣಿಗಳಿಗೆ, ಪಶು-ಪಕ್ಷಿಗಳಿಗೆ ಹಾಗೂ ಜನರಿಗೆ ಕುಡಿಯಲು ನೀರು ಒದಗಿಸಿದಂತಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಎನ್‍ಆರ್‍ಎಮ್ ಸಂಯೋಜಕ ಪ್ರಶಾಂತ, ಐಇಸಿ ಸಂಯೋಜಕ ಬಸಪ್ಪ ಹೋತಪೇಟ, ಬಿಎಫ್‍ಟಿ ಪ್ರವೀಣ, ಗ್ರಾಮ ಕಾಯಕ ಮಿತ್ರ ರೇಣುಕಾ, ಕಾಯಕ ಬಂದುಗಳು ಹಾಗೂ ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.