ಸಿಎಂ ಮಗ ಯತೀಂದ್ರ ಮಾತಾಡಿದ ವಿಡಿಯೋ ವೈರಲ್ – ಎಂ.ಬಿ.ಪಾಟೀಲ್ ಏನಂದ್ರು..!
ಯತೀಂದ್ರ ಮಾತಾಡಿರುವ ವಿಡಿಯೋ ವೈರಲ್
ಸಿಎಂ ಮಗ ಯತೀಂದ್ರ ಮಾತಾಡಿದ ವಿಡಿಯೋ ವೈರಲ್ – ಎಂ.ಬಿ.ಪಾಟೀಲ್ ಏನಂದ್ರು..!
ಯತೀಂದ್ರ ವಿಡಿಯೋದಲ್ಲಿ ಮಾತಾಡಿದ ಪಾಟೀಲ್ ಹೇಳಿಕೆ ಏನು.?
ಬೆಂಗಳೂರಿನಿಂದ ತುಣುಕೊಂದರಲ್ಲಿ ಸಿಎಂ ಸಿದ್ರಾಮಯ್ಯನವರ ಪುತ್ರ, ಯತೀಂದ್ರ ಅವರು ಮಾತಾಡಿದ ಲಿಸ್ಟ್ ಕುರಿತು ರಾಜ್ಯದಾದ್ಯಂತ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಯತೀಂದ್ರ ಹಲೋ ಅಪ್ಪ..ಎಂದು ಸಂಭಾಷಣೆ ಆರಂಭಿಸಿ, ಯಾವ ಲಿಸ್ಟ್ ಆ ಲಿಸ್ಟ್ ನಲ್ಲಿ ನಾಲ್ಕೈದು ಅಷ್ಟೆ ಕೊಟ್ಟಿರುವೆ, ಉಳಿದದ್ದ್ಯಾವದು ..? ಮಹಾದೇವನಿಗೆ ಕೊಡು..ಹಲೋ’ ಮಹಾದೇವ ಯಾರು ಕೊಟ್ಟಿರೋದು ಈ ಲಿಸ್ಟ್ ನಾನು ಕೊಟ್ಟಿರೋ ನಾಲ್ಕೈದು ಅಷ್ಟೆ ಮಾಡು..! ಯಾರ ಕೊಡ್ತೀರೋದು ಇದೆಲ್ಲ ಎಂದು ಮಾತನಾಡಿರುವದು ಕೇಳಬಹುದು.
ಈ ಕುರಿತು ಎಂ.ಬಿ.ಪಾಟೀಲ್ ಏನಂದ್ರು ಗೊತ್ತಾ..?
ಯತೀಂದ್ರ ಮಾತಾಡಿರುವ ವಿಡಿಯೋ ಬಗ್ಗೆ ಏನ್ ಹೇಳ್ತೀರಿ..? ಇಲ್ಲಿ ಸಮ್ ಟಿಂಗ್ ನಡಿತಿದೆ ಎಂದು ಬಿಜೆಪಿ, ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.?’ ಎಂಬ ಪ್ರಶ್ನೆಗೆ, ..
ಪಾಟೀಲರ ಉತ್ತರ ಹೀಗಿತ್ತು…
ವಿಡಿಯೋ ನಾನು ನೋಡಿಲ್ಲ. ಸತ್ಯಾಸತ್ಯ ತಿಳಿದುಕೊಂಡು ಹೇಳುತ್ತಾರೆ. ವಿಡಿಯೋ ಗಳೆಲ್ಲ ತಿರುಚುತ್ತಾರೆ. ಇವಾಗ್ ನಿಮ್ಮ ಅಂಗಿ ಕಲರ್ ಚೇಂಜ್ ಮಾಡಬಹುದು. ಮಿಮಿಕ್ರಿ ಮಾಡಿ ಧ್ವನಿ ಹೊಂದಾಣಿಕೆ’ ಸಾಕಷ್ಟು ಘಟನೆಗಳು ನಡೆದಿವೆ.
ಮೊನ್ನೆ ನನಗೆ ಅಹ್ಮದ ಪಟೇಲರ ಧ್ವನಿ ಯಲಿ ಮಿಮಿಕ್ರಿ ಮಾಡಿ ಮಾತನಾಡಿದ್ದರು. ನನಗೆ ಸಂಶಯ ಬಂತು. ಸಿಕ್ಕಾಕ್ಕೊಂದ ಅಂವ ಮಹಾರಾಷ್ಟರದಂವ, ನಾಟಕ ಕಲಾವಿದ. ಹೀಗೆ ಮಾಡಬಹುದೇ..? ಹೀಗಾಗಿ ಸತ್ಯಾಸತ್ಯ ಪರಾಮರ್ಶಿ ಮಾತನಾಡುವೆ ಎಂಬ ಉತ್ತರವಿತ್ತರು.