Home
ಈ ವರ್ಷವೂ ಜಿಪಂ & ತಾಪಂ ಚುನಾವಣೆ ನಡೆಯೋದೆ ಡೌಟ್ – ಕೆ.ಎಸ್.ಈಶ್ವರಪ್ಪ
ಜಿಪಂ & ತಾಪಂ ಚುನಾವಣೆ ನಡೆಯೋದೆ ಡೌಟ್ – ಕೆ.ಎಸ್.ಈಶ್ವರಪ್ಪ
ಜಿಪಂ, ತಾಪಂ ಚುನಾವಣೆ ಮತ್ತೊಂದು ವರ್ಷವೇ ಮುಂದೋಗಲಿದೆ – ಈಶ್ವರಪ್ಪ
ಬೆಂಗಳೂರಃ ಈಗಾಗಲೇ ಸಾಕಷ್ಟು ನನೆಗುದಿಗೆ ಬಿದ್ದಿದ್ದ ರಾಜ್ಯದ ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ಇನ್ನೂ ಒಂದು ವರ್ಷ ಮುಂದೋದರು ಅಚ್ಚರಿ ಪಡುವಂತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮದ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮೊದಲಿಗೆ ಕೋವಿಡ್ ಕಾರಣದಿಂದ ಜಿಪಂ, ತಾಪಂ ಚುನಾವಣೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆಗಳು ಮುಂದೂಡಲಾಯಿತು.
ಈಗ ಜಿಪಂ & ತಾಪಂ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ಈಚೆಗೆ ಆದೇಶವೊಂದನ್ನು ಹೊರಡಿಸಿರುವ ಹಿನ್ನೆಲೆ ರಾಜ್ಯದಲ್ಲಿ ಜಿಪಂ & ತಾಪಂ ಚುನಾವಣೆ ನಡೆಯೋದು ಅನುಮಾನ ಎಂದ ಅವರು,
ಬಿಜೆಪಿ ಸರ್ಕಾರದ ಅವಧಿಯಲ್ಲೇ ಚುನಾವಣೆ ನಡೆಯೋದು ಡೌಟ್ ಇದೆ. ಇನ್ನೂ ಯಾವಾಗ ಮುಹೂರ್ತ ಬರುತ್ತದೋ ಗೊತ್ತಿಲ್ಲ ಎಲ್ಲರೂ ಕಾದು ನೋಡಬೇಕಿದೆ ಎಂದಿದ್ದಾರೆ.