ಪ್ರಮುಖ ಸುದ್ದಿ
ಏಕಾಏಕಿ ಜಿಮ್ ಬಂದ್ ಗೆ ಆದೇಶಃ ಮಾಲೀಕರಿಂದ ಆಕ್ರೋಶ
ಏಕಾಏಕಿ ಜಿಮ್ ಬಂದ್ ಗೆ ಆದೇಶಃ ಮಾಲೀಕರಿಂದ ಆಕ್ರೋಶ
ಬೆಂಗಳೂರಃ ಸರ್ಕಾರ ಏಕಾಏಕಿ ಜಿಮ್ ಬಂದ್ ಮಾಡುವಂತೆ ಆದೇಶ ನೀಡಿರುವದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಜಿಮ್ ಅಸೋಸಿಯೇಷನ್ ಅಧ್ಯಕ್ಷ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೋವಿಡ್ ಮಾರ್ಗಸೂಚಿಯಂತೆ ಜಿಮ್ ನಡೆಸಲಾಗುತ್ತಿದೆ. ಆದಾಗ್ಯ ಹೊಸ ಮಾರ್ಗಸೂಚಿ ಜಾರಿಗೆ ತಂದು ಏಕಾಏಜಿ ಜಿಮ್ ಬಂದ್ ಮಾಡಿ ಎಂದರೆ ಹೇಗೆ.? ಕಟ್ಟಡ ಬಾಡಿಗೆ, ಕರೆಂಟ್ ಬಿಲ್ ಎಲ್ಲಿಂದ್ ಕಟ್ಟಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೋವಿಡ್ ಮಾರ್ಗಸೂಚಿ ಪ್ರಕಾರ ಜಿಮ್ ನಡೆಸಲಾಗುತ್ತಿದೆ. ಸಂಪೂರ್ಣ ಬಂದ್ ಮಾಡಿದರೆ ಜೀವನ ಕಷ್ಟವಾಗುತ್ತದೆ. ಜಿಮ್ ನಿರ್ವಹಣೆ ಕಷ್ಟವಾಗಲಿದೆ.
ಕೆಲವರು ಹೊಸದಾಗಿ ದುಡ್ಡು ಹಾಕಿ ನೂತನ ಸಾಮಾಗ್ರಿಗಳನ್ನು ತಂದಿದ್ದಾರೆ. ಹತ್ತು ಹಲವಾರು ಖರ್ಚುಗಳಿವೆ. ಅದರಿಂದಲೇ ಬದುಕು ಕಟ್ಟಿಕೊಂಡ ನಮಗೆಲ್ಲ ತೊಂದರೆಯಾಗಲಿದೆ.
ಈ ಕುರಿತು ಸರ್ಕಾರ ಮರು ಪರಿಶೀಲನೆ ನಡೆಸಿ ಜಿಮ್ ಓಪನ್ ಮಾಡಲು ಅನುಮತಿ ನೀಡಬೇಕೆಂದು ಅವರು ಮನವಿ ಮಾಡಿದರು.