Homeಅಂಕಣಮಹಿಳಾ ವಾಣಿ
ದಿಢೀರ್ ಮೊಸರು ಅವಲಕ್ಕಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು…
ಮೀಡಿಯಂ ಅವಲಕ್ಕಿ-ಅರ್ಧ ಪಾವು
ಮೊಸರು-1 ಪಾವು
ಕಾಯಿತುರಿ-1 ಹಿಡಿ
ಕರಿಬೇವು- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಜಜ್ಜಿದ ಹಸಿ ಶುಂಠಿ- ಸ್ವಲ್ಪ
ಹಸಿ ಮೆಣಸಿನಕಾಯಿ ಪೇಸ್ಟ್-1 ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ದಾಳಿಂಬೆ ಬೀಜ-1 ಹಿಡಿ
ಒಗ್ಗರಣೆಗೆ ಇಂಗು
ಸಾಸಿವೆ- ಸ್ವಲ್ಪ
ಜೀರಿಗೆ- ಸ್ವಲ್ಪ
ಉದ್ದಿನ ಬೇಳೆ, ಕಡ್ಲೆಬೇಳೆ-ಸ್ವಲ್ಪ
ಮಾಡುವ ವಿಧಾನ…
ಅವಲಕ್ಕಿಯನ್ನು ಮೆತ್ತಗಾಗುವಷ್ಟು ಮಾತ್ರ ನೀರಲ್ಲಿ ನೆನೆಸಿಡಿ. ಒಂದು ಪಾತ್ರೆಗೆ ಅವಲಕ್ಕಿ ಹಾಕಿ. ಬಾಣಲೆಗೆ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಸ್ವಲ್ಪ ತುಪ್ಪಕ್ಕೆ ಹಾಕಿ ಒಗ್ಗರಿಸಿಕೊಂಡು ಅವಲಕ್ಕಿ ಮೇಲೆ ಹಾಕಿ.
ನಂತರ ಉಪ್ಪು, ಕಾಯಿತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಶುಂಠಿ ಸಹ ಹಾಕಿ ಗಟ್ಟಿ ಮೊಸರನ್ನು ಮತ್ತು ದಾಳಿಂಬೆ ಬೀಜವನ್ನು ಹಾಕಿ ಚೆನ್ನಾಗಿ ಕಲೆಸಿದರೆ, ರುಚಿಕರವಾದ ಮೊಸರಿನ ಅವಲಕ್ಕಿ ಸವಿಯಲು ಸಿದ್ಧ.