ರಾಹುಲ್ ಗಾಂಧಿ ರೋಡ್ ಶೋಃ ರಸ್ತೆ ಸಂಚಾರ ಬದಲಾವಣೆ ಸಿಪಿಐ ನಾಗರಾಜ ಪ್ರಕಟಣೆ
ಶಹಾಪುರ ನಗರದ ಹೆದ್ದಾರಿ ಸಂಚಾರ 3 ತಾಸು ಸ್ಥಗಿತ.! ಬೇರೆ ಮಾರ್ಗ ಬಳಕೆಗೆ ಸೂಚನೆ
ಯಾದಗಿರಿಃ ಫೆ.12 ರಂದು ನಡೆಯುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರೋಡ್ ಶೋಗಾಗಿ ಜಿಲ್ಲೆಯ ಶಹಾಪುರ ನಗರದ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗದಿರಲಿ ಎಂಬ ಕಾರಣಕ್ಕೆ ಪೊಲೀಸರು ವಾಹನಗಳ ರಸ್ತೆ ಸಂಚಾರವನ್ನು ಬದಲಿಸಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಫೆ.12 ರಂದು ಮದ್ಯಾಹ್ನ 12 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ಆದೇಶಿಸಲಾಗಿದೆ. ಹೀಗಾಗಿ ಕಲಬುರ್ಗಿಯಿಂದ ಸುರಪುರ ಮಾರ್ಗಕ್ಕೆ ತೆರಳುವವರು ಭೀಮರಾಯನಗುಡಿ ವೃತ್ತದಿಂದ ಮಾಲಗತ್ತಿ ಮಾರ್ಗ ಮೂಲಕದ ಸುರಪುರಕ್ಕೆ ತೆರಳಬೇಕು,
ಕಲಬುರ್ಗಿಯಿಂದ ಯಾದಗಿರಿಗೆ ತೆರಳುವ ಪ್ರಯಾಣಿಕರು ಭೀಮರಾಯನಗುಡಿ ಕೆನಾಲ ರಸ್ತೆಯ ಮೂಲಕ ದೋರನಹಳ್ಳಿಗೆ ತೆರಳಬೇಕು, ಸುರಪುರದಿಂದ ಕಲಬುರ್ಗಿಗೆ ತೆರಳುವವರು ಕೃಷ್ಣಾಪುರ, ಸಗರ, ಮಹಲರೋಜಾ, ಭೀಮರಾಯನಗುಡಿ ಮೂಲಕ ತೆರಳಬೇಕು.
ಹತ್ತಿಗೂಡುರುದಿಂದ ಕಲಬುರ್ಗಿಗೆ ತೆರಳುವ ಸಾರ್ವಜನಿಕರು ರಸ್ತಾಪುರ, ಸಗರ ಮೂಲಕ ಭೀಮರಾಯನಗುಡಿ ರಸ್ತೆಯ ಮೂಲಕ ತೆರಳಬೇಕೆಂದು ಸಿಪಿಐ ನಾಗರಾಜ ಜೆ. ಪತ್ರಿಕಾ ಪ್ರಕಟಣೆಗೆ ನೀಡಿದ್ದಾರೆ.