ಆನೇಗುಂದಿ ಆದಿಶಕ್ತಿ ಮುಂದೆ ಕೈಜೋಡಿಸಿದ ಶ್ರೀರಾಮುಲು

ಆದಿಶಕ್ತಿಗೆ ಶರಣೆಂದ ಶ್ರೀರಾಮುಲು
ಆನೇಗುಂದಿ ಆದಿಶಕ್ತಿ ದೇಗುಲಕ್ಕೆ ಸಚಿವ ಶ್ರೀರಾಮುಲು ಭೇಟಿ
ಗಂಗಾವತಿಃ ತಾಲ್ಲೂಕಿನ ಆನೇಗೊಂದಿ ವಾಲಿಕಿಲ, ಆದಿಶಕ್ತಿ ದೇಗುಲ ಮತ್ತು ಇತಿಹಾಸ ಪ್ರಸಿದ್ಧ ಪಂಪಾಸರೋವರಕ್ಕೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.
ಆದಿಶಕ್ತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಇಲ್ಲಿನ ಗೋಶಾಲೆಗೆ ಭೇಟಿ ನೀಡಿ ಗೋವುಗಳಿಗೆ ಮೇವು ತಿನ್ನಿಸುವ ಮೂಲಕ ಪೂಜೆ ಸಲ್ಲಿಸಿದರು .
ಇದಕ್ಕೂ ಮುಂಚಿತವಾಗಿ ಅವರು ಪಂಪಾಸರೋವರಕ್ಕೆ ಭೇಟಿ ನೀಡಿ ಶ್ರೀ ವಿಜಯಲಕ್ಷ್ಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸರೋವರದ ಮೀನುಗಳಿಗೆ ಆಹಾರ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ವಾಲಿ ಕಿಲ್ಲಾ, ಆದಿಶಕ್ತಿ ದೇಗುಲ ಜೀರ್ಣೋದ್ಧಾರ ಮತ್ತು ಪುನರ್ ನಿರ್ಮಾಣಕ್ಕಾಗಿ ವೈಯಕ್ತಿಕ ಮತ್ತು ಸರ್ಕಾರದ ಅನುದಾನವನ್ನು ಮಂಜೂರಿ ಮಾಡಿಸಲಾಗುವದು.
ಮತ್ತು ಗೋಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಗೋವುಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಮುಖಂಡರಾದ ಕೆಲೋಜಿ ಸಂತೋಷ್, ಅರ್ಚಕ ಬ್ರಹ್ಮಯ್ಯಸ್ವಾಮಿ, ರಾಜಣ್ಣ, ಗೋವರ್ಧನ್ ರಾಜು ಸೇರಿದಂತೆ ಹಲವರಿದ್ದರು.