ಸಾಲಮನ್ನಾ ಹಣ ವಾಪಸ್ ಪಡೆಯುತ್ತಿದೆಯಾ ರಾಜ್ಯ ಸರ್ಕಾರ.!
ನಾಮ್ ಕೆ ವಾಸ್ತೆ ನಡೆಯುತ್ತಿದಿಯಾ ಸಾಲ ಮನ್ನಾ ಯೋಜನೆ…?
ಯಾದಗಿರಿಃ ಚುನಾವಣೆ ವೇಳೆ ಸಾಲ ಮನ್ನಾ ಮಾಡಿದ್ದೇವೆ ಎಂದು ಬೀಗಿ ರೈತರ ಮತಗಳನ್ನು ಪಡೆದಿದ್ದ ರಾಜ್ಯ ಸರ್ಕಾರದ ಬಣ್ಣ ಇದೀಗ ಬಯಲಾಗಿದೆ.
ಸಾಲ ಮನ್ನಾ ಮಾಡಿದ್ದು ಕೆಲವಡೆ ಹಲವಾರು ಜನ ರೈತರ ಅಕೌಂಟಿಗೆ ಹಣ ಜಮೆ ಮಾಡಿತ್ತು. ಆದರೆ ಇದೀಗ ಸರ್ಕಾರ ರೈತನ ಅಕೌಂಟಿಗೆ ಸಾಲ ಮನ್ನಾ ಯೋಜನೆಯಡಿ ಜಮೆ ಮಾಡಿದ ದುಡ್ಡನ್ನು ವಾಪಾಸ್ ಪಡೆಯುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ.
ಹೌದು.. ಅನ್ನದಾತನಿಗೆ ಸಾಲ ಮನ್ನಾ ಹಣದ ಆಸೆ ತೋರಿಸಿ ಮೋಸ ಮಾಡಿದ ರಾಜ್ಯ ಸರ್ಕಾರ. ಇದೀಗ ರೈತರ ಅಕೌಂಟನಿಂದ ಸಾಲ ಮನ್ನಾ ಹಣ ಜಮೆ ಮಾಡಿದ್ದ ಬ್ಯಾಂಕ್ ಗಳು ರೈತರ ಅಕೌಂಟ್ ನಿಂದ ರಿಫಂಡ್ ಮಾಡಿಕೊಂಡಿವೆ.
ತಾಲೂಕಿನ ನುರಾರು ಜನ ರೈತರ ಅಕೌಂಟ್ ನಿಂದ ಹಣ ರಿಫಂಟ್ ಆಗಿದೆ. ರಿಫಂಡ್ ಮಾಡಿಕೊಂಡಿರುವ ಬಗ್ಗೆ ರೈತರು ಬ್ಯಾಂಕ್ ಗೆ ಕೇಳಲು ಹೋದರೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂಧಿಸುತ್ತಿಲ್ಲ. ರೈತರಿಗೆ ನೀಡಿದ ಸಾಲ ಮನ್ನಾ ಹಣ ಅಕೌಂಟ್ ನಿಂದ ಮಂಗಮಾಯವಾಗುತ್ತಿವೆ ಎಂದು ರೈತ ಮುಖಂಡ ಮಲ್ಲಯ್ಯ ಪೋಲಂಪಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭ ಚುನಾವಣೆ ವೇಳೆ ರೈತರ ಖಾತೆಗೆ ಸಾಲಮನ್ನ ಹಣ ಹಾಕಿದ್ದ ಸರ್ಕಾರ. ಚುನಾವಣೆ ಫಲಿತಾಂಶ ಬಳಿಕ ಹಣ ವಾಪಸ್ ಪಡೆಯುತ್ತಿದೆ ಎಂದು ರೈತರು ದೂರಿದ್ದಾರೆ.
ರೈತರ ಖಾತೆಗೆ ಹಾಕಿದ ಹಣ ರಿಫಂಡ್ ಮಾಡಿಕೊಂಡ ಸರ್ಕಾರ. ಅನ್ನದಾತನಿಗೆ ಅನ್ಯಾಯ ಮಾಡುತಗತಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ಸಗರ, ಶಹಾಪುರ ರೈತರ ಖಾತೆಯಿಂದ ಸಾಲ ಮನ್ನಾದ ಹಣ ವಾಪಾಸ್ ಪಡೆಯಲಾಗಿದೆ.

ಎಸ್ ಬಿಐ ಬ್ಯಾಂಕ್ ಮುಂದೆ ಜಮಾವಣೆಗೊಂಡ ರೈತರುಃ
ಸಾಲಮನ್ನ ಯೋಜನೆ ಸರ್ಕಾರ ನೀಡಿದ ಹಣ ವಾಪಸ್ ಪಡೆಯುತ್ತಿರುವ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ,
ಇಲ್ಲಿನ ಹಿರೇಮಠ ಪೆಟ್ರೋಲ್ ಬಂಕ್ ಎದುರಿಗಿರುವ ಎಸ್‌ಬಿಐ ಬ್ಯಾಂಕ್ ಮುಂದೆ ರೈತರು ಜಮಾವಣೆಗೊಂಡಿದ್ದು, ತಮ್ಮ ಅಕೌಂಟಿಗೆ ಜಮೆ ಮಾಡಲಾಗಿದ್ದ ಸಾಲ ಮನ್ನಾ ಯೋಜನೆ ಹಣ ವಾಪಸ್ ರಿಫಂಡ್ ಆಗಿರುವ ಕುರಿತು ತಮ್ಮ ಪಾಸ್ ಬುಕ್ ಸಮೇತ ಕೈ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ರೈತರಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ. ಇಂತಹ ಘೋರ ಅನ್ಯಾಯ ಮಾಡಿದ ಸರ್ಕಾರಕ್ಕೆ ಉಳಿಗಾಲವಿಲ್ಲ. ಅನ್ನದಾತರ ಜೊತೆ ಚಕ್ಕಂದ ಆಡುತ್ತಿದೆಯೇ.? ಸಾಲ ಮನ್ನಾ ಎಂದು ಬೊಗಳಿದ್ದು, ಕೆಲವರಿಗೆ ಹಣ ಖಾತೆಗೆ ಜಮಾವಣೆ ಮಾಡಿ ಪ್ರಸ್ತುತ ಆ ಹಣ ವಾಪಸ್ ಮಾಡೆಯುವದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
—–
ನನ್ನ ಅಕೌಂಟಿಗೆ ಸಾಲ ಮನ್ನಾ ಹಣ 50.000. ಸಾವಿರ ಜಮೆ ಆಗಿತ್ತು, ಆದರೆ ಇದೀಗ ಚಕ್ ಮಾಡಿದ್ದು, ಆ ಹಣ ರಿಫಂಡ್ ಆಗಿದೆ. ಬ್ಯಾಂಕ್ ನವರು ವಾಪಾಸ್ ಪಡೆದಿದ್ದಾರೆ. ಈ ಕುರಿತು ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಸ್ಪಂಧಿಸುತ್ತಿಲ್ಲ.
ಮಹಾದೇವಪ್ಪ ಬಳಗಾರ. ರೈತ ಸಗರ.