ಅಸತ್ಯವನ್ನು ಹೇಳಬೇಡಿ ಅಪ್ಪಿತಪ್ಪಿ ಹೇಳಿದ್ರೆ ಕೂಡಲೇ ಸರಿಪಡಿಸಿಕೊಳ್ಳಿ

ಅಪ್ಪಿ ತಪ್ಪಿ ಅಸತ್ಯವನ್ನು ಹೇಳಿದ ಕೂಡಲೇ ಸರಿಪಡಿಸಿಕೊಳ್ಳಿ
ಆನಂದಾಶ್ರಮಕ್ಕೆ ಗುರುವು ವಿವೇಕಾನಂದಸ್ವಾಮಿ, ಒಂದು ಸಾರಿ ಸತ್ಯವನ್ನು ಕುರಿತು ಶಿಶ್ಯರಿಗೆ ಪ್ರವಚನ ಹೇಳುತ್ತಾ ಯಾವಾಗಲೂ ಸತ್ಯವನ್ನೇ ಹೇಳಬೇಕು, ಅಪ್ಪಿ ತಪ್ಪಿ ಏನಾದರೂ ಅಸತ್ಯವನ್ನು ಹೇಳಿದ್ದೇ ಆದರೆ ಕೂಡಲೇ ಅದನ್ನು ಸರಿಪಡಿಸಿಕೊಳ್ಳಬೇಕು. ಅದನ್ನೇ ಅಭ್ಯಾಸ ಮಾಡಿಕೊಳ್ಳಲೂಬಾರದು ಎಂದು ಹೇಳಿದನು.
ಶೇಖರನಿಗೆ ಗುರುವು ಹೇಳಿದ ಬೋಧೆಯ ಮಾತು ಅರ್ಥವಾಗಲಿಲ್ಲ. ಅದನ್ನು ಗ್ರಹಿಸಿದ ಗುರುವು ನಿರೂಪಣೆಯ ಮೂಲಕ ಬೋಧಿಸಬೇಕೆಂದುಕೊಂಡರು. ಮಾರನೆಯ ದಿನ ಶೇಖರನನ್ನು ಸ್ನಾನಕ್ಕೆ ನದೀ ತೀರಕ್ಕೆ ಕರೆದೊಯ್ದರು. ಹಿಂದಿನ ದಿನ ಮಳೆ ಬಿದ್ದು ದಾರಿಯೆಲ್ಲಾ ಕೆಸರಾಗಿತ್ತು.
ಗುರುವು ಕಾಲಿಗೆ ಕೆಸರಾಗದಂತೆ ಜಾಗ್ರತೆಯಾಗಿ ನಡೆಯುತ್ತಿದ್ದನು. ಶೇಖರನೂ ಹಾಗೇ ಗುರುವನ್ನು ಅನುಸರಿಸುತ್ತಿದ್ದನು. ಅಷ್ಟರಲ್ಲಿ ಒಂದು ಕಡೆ ನೋಡದೆಯೇ ಶೇಖರನು ಕೆಸರಿನಲ್ಲಿ ಕಾಲಿಟ್ಟನು, ಹೇಗೋ ಕಾಲು ಕೆಸರಾಯಿತಲ್ಲ ಎಂದು ನಿರ್ಲಕ್ಷ್ಯದಿಂದ ಕೆಸರಲ್ಲೇ ನಡೆಯುತ್ತಾ ಹೋದನು.
ಅದನ್ನು ನೋಡಿದ ಗುರುವು, ನೋಡಿದೆಯಾ ಶೇಖರ್ ಒಂದು ಸಾರಿ ಕೆಸರಲ್ಲಿ ಕಾಲಿಡುತ್ತಲೇ ನಿನ್ನಲ್ಲಿ ಎಂಥಾ ಮಾರ್ಪಾಡು ಕಂಡು ಬಂದಿತು. ಮೊದಲು ಕಾಲು ಕೆಸರಾಗಿದೆ ಅಂದುಕೊಂಡು ನಿರ್ಲಕ್ಷ್ಯದಿಂದ ನಡೆಯುತ್ತಿರುವೆ.
ಹಾಗೇ ಒಂದು ಸಾರಿ ಅಸತ್ಯವನ್ನು ಹೇಳಿದರೆ ಅದೇ ಅಭ್ಯಾಸವಾಗಿ ಹೋಗುತ್ತದೆ. ಅದಕ್ಕೆ ಒಂದು ಸಾರಿ ತಿಳಿಯದೆ ತಪ್ಪು ಮಾಡಿದಲ್ಲಿ ಕೂಡಲೇ ಅದನ್ನು ತಿದ್ದಿ ಕೊಳ್ಳಬೇಕು ಎಂದು ಹೇಳಿದನು ಗುರು. ಈ ನಿರೂಪಣೆಯಿಂದ ಅವನಿಗೆ ಗುರುವು ಮೊದಲು ಹೇಳಿದ್ದು ಅರ್ಥವಾಯಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.