ನ.15 ರಂದು ಮಾಜಿ ಮಂತ್ರಿ ದಿ.ಬಾಪುಗೌಡ ದರ್ಶನಾಪುರವರ ಪುಣ್ಯಸ್ಮರಣೆ

ನ.15 ರಂದು ಮಾಜಿ ಮಂತ್ರಿ ದಿ.ಬಾಪುಗೌಡರ ಪುಣ್ಯಸ್ಮರಣೆ
yadgiri, ಶಹಾಪುರಃ ನಾಡು ಕಂಡ ಅಪ್ರತಿಮ ರಾಜಕಾರಣಿ, ಅಭಿವೃದ್ಧಿ ಹರಿಕಾರ, ರೈತರ, ದುರ್ಬಲರ, ಬಡವರ ದೀನ ಬಂಧು, ಮಾಜಿ ಮಂತ್ರಿ ದಿವಂಗತ ಬಾಪುಗೌಡ ದರ್ಶನಾಪುರವರ 33 ನೇಯ ಪುಣ್ಯಸ್ಮರಣೆ ಇದೆ ನ.15 ರಂದು ಸೋಮವಾರ ನಡೆಯಲಿದೆ.
ಅಂದು ಬೆಳಗ್ಗೆ ಸ್ವಗ್ರಾಮ ದರ್ಶನಾಪುರದಲ್ಲಿರುವ ಅವರ ಪುಣ್ಯ ಭೂಮಿಯಲ್ಲಿ ವಿಶೇಷ ಪೂಜೆ, ಮತ್ತು ಭೀಮರಾಯನ ಗುಡಿಯಲ್ಲಿರುವ ದಿ.ಬಾಪುಗೌಡ ದರ್ಶನಾಪುರವರ ಪ್ರತಿಮೆಗೆ ಬೆಳಗ್ಗೆ 9 ಗಂಟೆ 30 ನಿಮಿಷಕ್ಕೆ ಅಭಿಮಾನಿ ಬಳಗ ಹಾಗೂ ಪ್ರಮುಖರಿಂದ ಪುಷ್ಪಾರ್ಚನೆ, ಪೂಜೆ ನೆರವೇರಲಿದೆ.
ನಂತರ ಅವರ ಕನಸಿನ ಕಾರ್ಯಕ್ಷೇತ್ರ ನಗರದ ಚರಬಸವೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ 10 ಗಂಟೆಗೆ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು, ಜನಪ್ರತಿನಿಧಿಗಳು, ಅನುಯಾಯಿಗಳು, ಅಭಿಮಾನಿಗಳು ಭಾಗವಹಿಸಲಿದ್ದಾರೆ. ಸರ್ವರಿಗೂ ಸ್ವಾಗತವಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರೂ ಕೋವಿಡ್ ನಿಯಮಾವಳಿಯನ್ನು ಎಲ್ಲರೂ ಅನುಸರಿಸಬೇಕೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.