ಗುಜರಾತ್- ಲೋಕಾ ಮತದಾನಕ್ಕೂ ಮೊದಲೆ ಖಾತೆ ತೆರೆದ ಬಿಜೆಪಿ ಹೇಗಿದು.? ಓದಿ
ಕೈ ಅಭ್ಯರ್ಥಿ ನಾಮಪತ್ರ ತಿರಸ್ಕೃತ, 8 ಅಭ್ಯರ್ಥಿಗಳು ನಾಮಪತ್ರ ವಾಪಸ್
ಗುಜರಾತ್- ಲೋಕಾ ಮತದಾನಕ್ಕೂ ಮೊದಲೆ ಖಾತೆ ತೆರೆದ ಬಿಜೆಪಿ ಹೇಗಿದು.? ಓದಿ
ಕೈ ಅಭ್ಯರ್ಥಿ ನಾಮಪತ್ರ ತಿರಸ್ಕೃತ, 8 ಅಭ್ಯರ್ಥಿಗಳು ನಾಮಪತ್ರ ವಾಪಸ್
ವಿವಿ ಡೆಸ್ಕ್ ಃ ಲೋಕಸಭಾ ಚುನಾವಣೆಗೆ ಮತದಾನ ನಡೆಯುವ ಮುನ್ನವೇ ಗುಜರಾತ್ ನಲ್ಲಿ ಬಿಜೆಪಿ ಖಾತೆ ತೆರೆಯುವ ಮೂಲಕ ವಿಜಯ ದುಂದುಭಿ ಬಾರಿಸಿದೆ.
ಗುಜರಾತ್ ನ ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಗೆಲುವು ಸಾಧಿಸಿದ್ದಾರೆ.
ಅದ್ಹೇಗೇ.?
ಗುಜರಾತ್ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರೂ ಆದ ಮುಕೇಶ್ ದಲಾಲ್ ಸೂರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿದ್ದರು. ಭರ್ಜರಿ ಮತ ಪ್ರಚಾರವು ನಡೆದಿತ್ತು.
ಆದರೆ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ. ಅಲ್ಲದೆ ಬಿಎಸ್ ಪಿ ಸೇರಿದಂತೆ ಇತರೆ 8 ಪಕ್ಷದ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿರುವ ಕಾರಣ ಯಾವುದೇ ಎದುರಾಳಿಗಳಿಲ್ಲದ ಕಾರಣ ಸುಲಭವಾಗಿ ಬಿಜೆಪಿ ಅಭ್ಯರ್ಥಿ ಮುಖೇಶ ದಲಾಲ್ ಗೆಲುವು ಸಾಧಿಸಿದಂತಾಗಿದೆ. ಹೀಗಾಗಿ ಮುಖೇಶ ಅವರು ಗೆಲುವಿನ ನಗೆ ಬಿರಿದ್ದಾರೆ ಎಂದು ತಿಳಿದು ಬಂದಿದೆ. ಗೆಲುವಿನ ಖುಷಿಯನ್ನು ಬಿಜೆಪಿ ಸಿಹಿ ತಿಂಡಿ ತಿನ್ನಿಸುವ ಮೂಲಕ ಪ್ರಮುಖರೊಂದಿಗೆ ಹಂಚಿಕೊಂಡಿದೆ.