ಬಿ.ಆರ್.ಪಾಟೀಲ್ ಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ ಯಾಕೆ ಗೊತ್ತಾ.? ಡಿಕೆಶಿ ವಿರುದ್ಧ ಲಿಂಗಾಯತ
ಪಾಟೀಲ್ ಕ್ಷಮೆ ಕೋರಿದ ಡಿಕೆಶಿ
ಡಿಕೆಶಿ ವಿರುದ್ಧ ಲಿಂಗಾಯರ ಆಕ್ರೋಶ, ಹೈಕಮಾಂಡ್ಗೆ ದೂರು
ವಿವಿ ಡೆಸ್ಕ್ಃ ಮೇಕೆದಾಟು ಪಾದಯಾತ್ರೆ ವೇಳೆ ಡಿ.ಕೆ.ಶಿವಕುಮಾರ ಮಾಜಿ ಶಾಸಕ,ಲಿಂಗಾಯತ ಸಮಾಜದ ಮುಖಂಡ ಬಿ.ಆರ್.ಪಾಟೀಲ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಈ ಕುರಿತು ಡಿ.ಕೆ.ಶಿವಕುಮಾರ ಬಿ.ಆರ್.ಪಾಟೀಲ್ ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ ಎನ್ನಲಾಗಿದೆ.
ಮೇಕೆದಾಟು ಪಾದಯಾತ್ರೆ ವೇಳೆ ನಾನು ಅವರನ್ನು ತಳ್ಳಿ,ಅವಮಾನ ಮಾಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು, ತಮ್ಮಂತಹ ಹಿರಿಯರ ಜೊತೆ ಅನುಚಿತವಾಗಿ ವರ್ತಸುವದು ಕನಸಲ್ಲೂ ಕಾಣುವದು ಸಾಧ್ಯವಿಲ್ಲ. ಜನರ ನೂಕುನುಗ್ಗಲಿನ ಸಂದರ್ಭದಲ್ಲಿ ಅಚಾತುರ್ಯ ನಡೆದಿರಬಹುದು ಅದಕ್ಕಾಗಿ ನಾನು ವಿಷಾಧಿಸುತ್ತೇನೆ ಎಂದು ಬರೆದಿದ್ದಾರೆ.
ಅಲ್ಲದೆ ಈ ಘಟನೆ ಕುರಿತು ಸಿದ್ರಾಮಯ್ಯ ಪಕ್ಷದ ವರಿಷ್ಠ ಖಂಡ್ರೆ ಅವರ ಗಮನಕ್ಕೆ ತರಲಾಗಿತ್ತು. ಮತ್ತು ಸಮರ್ಪಕ ಘಟನಾ ವರದಿಯನ್ನು ಹೈಕಮಾಂಡ್ ಗೆ ನೀಡಲಾಗಿತ್ತು.
ಹೀಗಾಗಿ ಹೈಕಮಾಂಡ್ ರಾಹುಲ್ ಗಾಂಧಿ ಅವರಿಂದ ಡಿ.ಕೆ.ಶಿವಕುಮಾರ ಅವರಿಗೆ ಕೈ ಹೈಕಮಾಂಡ್ ನಿಂದ ನಿರ್ದೇಶನ ಬಂದಿರುವ ಹಿನ್ನೆಲೆ ಡಿಕೆಶಿ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಸಮಾಜ ಆಕ್ರೋಶ ವ್ಯಕ್ತಪಡಿಸಿದರು ಪ್ರತಿಭಟನೆ ಹಾದಿ ತುಳಿಯುವ ಎಚ್ಚರಿಕೆ ಹಿನ್ನೆಲೆ ವಿಪಕ್ಷ ನಾಯಕ ಸಿದ್ರಾಮಯ್ಯ ಹಾಗೂ ಈಶ್ವರ ಖಂಡ್ರೆ ಅವರು ಈ ವಿಷಯವನ್ನು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಹೀಗಾಗಿ ಡಿಕೆಶಿ ಕ್ಷಮೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.