ಪ್ರಮುಖ ಸುದ್ದಿ
ನಾಳೆ ಸಿಎಂ ಯಾದಗಿರಿಗೆಃ ಸಚಿವ ಚವ್ಹಾಣರಿಂದ ಸ್ಥಳ ಪರಿಶೀಲನೆ
ನಾಳೆ ಸಿಎಂ ಯಾದಗಿರಿಗೆಃ ಸ್ಥಳ ಪರಿಶೀಲನೆ ಮಾಡಿದ ಸಚಿವ ಚವ್ಹಾಣ
ಯಾದಗಿರಿಃ ಜ.6 ರಂದು ಯಾದಗಿರಿಗೆ ಸಿಎಂ ಯಡಿಯೂರಪ್ಪ ಆಗಮನ ಹಿನ್ನೆಲೆ ಕಾರ್ಯಕ್ರಮ ಪೂರ್ವ ಸಿದ್ಧತೆ ಕುರಿತು ಇಂದು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಅಚಿವ ಪ್ರಭು ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಳಿನ ಕಾರ್ಯಕ್ರಮ ಸಮಯ ಕುರಿತು ಜಿಲ್ಲಾಡಳಿತದೊಂದಿಹೆ ಸಕಲ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮ ವ್ಯವಸ್ಥೆ ಚನ್ನಾಗಿರುವಂತೆ ಎಲ್ಲೂ ಲೋಪ ದೋಷಗಳು ಉಲ್ಬಣವಾಗದಂತೆ ಎಚ್ಚರಿಕೆವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ವೆಂಕಟರಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರಡ್ಡಿ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನೆವಾಣೆ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.