ಕಾಂಗ್ರೆಸ್ ನಿಂದ ದೇಶಭಕ್ತಿ ಪಾಠ ಕಲಿಯಬೇಕಿಲ್ಲ – ಬಿವೈಆರ್
ಕಾಂಗ್ರೆಸ್ ನಿಂದ ದೇಶಭಕ್ತಿ ಪಾಠ ಕಲಿಯಬೇಕಿಲ್ಲ – ಬಿವೈಆರ್
ಲಾಲ್ ಚೌಕ್‌ನಲ್ಲಿ ದೇಶದ್ರೋಹಿಗಳು ತಾಕತ್ತಿದ್ರೆ ರಾಷ್ಟ್ರ ಧ್ವಜ ಹಾರಿಸಿ ಎಂದಾಗ ಎಲ್ಲಿತ್ತು ಕಾಂಗ್ರೆಸ್.?
ಶಿವಮೊಗ್ಗಃ ಹಿಂದೆ ಲಾಲ್ ಚೌಕ್ ನಲ್ಲಿ ದೇಶದ್ರೋಹಿಗಳು ತಾಕತ್ತಿದ್ರೆ ರಾಷ್ಟ್ರ ಧ್ವಜ ಹಾರಿಸಿ ಎಂದು ಧಮಕಿ ಹಾಕಿದಾಗ ನಮ್ಮ ನಾಯಕರಾದ ಈಶ್ವರಪ್ಪನವರು, ಯಡಿಯೂರಪ್ಪ ನವರು ಗುಂಡಿಗೆ ಎದೆಯೊಡ್ಡಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಆಗ ಎಲ್ಲಿತ್ತು ಕಾಂಗ್ರೆಸ್ ದೇಶ ಭಕ್ತಿ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಂದ ದೇಶ ಭಕ್ತಿ ಪಾಠ ಕಲಿಯಬೇಕಿಲ್ಲ ನಾವು. ನಾವು ಸಂಪೂರ್ಣ ದೇಶಭಕ್ತಿಯ ಭದ್ರ ಬುನಾದಿಯಲ್ಲಿಯೇ ಬೆಳೆಯುತ್ತಿರುವ ಪಕ್ಷ ನಮ್ಮದು.
ರಾಜಕಾರಣಕ್ಕೆ ಬೇರೆ ಸಮಸ್ಯೆ ಸಿಗದ ಕಾರಣ ಹಿಜಾಬ್ ವಿಚಾರ ಹಿಡಿದುಕೊಂಡು ಶಾಂತಿ ಭಂಗದ ಯತ್ನ ನಡೆಸುತ್ತಿದ್ದಾರೆ. ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿದೆ ಕಾಂಗ್ರೆಸ್ ಎಂದು ದೂರಿದ ಅವರು, ಮೊದಲು ಎಸ್ಡಿಪಿಐ, ಪಿಎಫ್ಐ ಘಟನೆ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಈ ಸಂಘಟನೆಗಳು ಸಾಮರಸ್ಯ ಬದುಕಿಗೆ ಧಕ್ಕೆ ತರುತ್ತಿವೆ. ಹಿಜಾಬ್ ವಿಷಯದಲ್ಲಿ ಮುಗ್ಧ ಮಕ್ಕಳ ಮನಸ್ಸನ್ನು ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.