ಪ್ರಮುಖ ಸುದ್ದಿ
ಶಹಾಪುರಃ 3 ತೊಲೆ ಬಂಗಾರ ಕಳುವು, ಸಿಸಿ ಟಿವಿಯಲ್ಲಿ ಸೆರೆ
ಬಂಗಾರದ ಸರ ಕದ್ದೊಯ್ದ ಕಳ್ಳಿಯರು, ಸಿಸಿ ಟಿವಿಯಲ್ಲಿ ಸೆರೆ

ಶಹಾಪುರಃ 3 ತೊಲೆ ಬಂಗಾರ ಕಳುವು
ಬಂಗಾರ ಕದ್ದೊಯ್ದ ಕಳ್ಳಿಯರು
ಶಹಾಪುರಃ ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್ ಕಲ್ಬುರ್ಗಿಗೆ ತೆರಳುವಾಗ ಅಪರಿಚಿತ ಮೂವರು ಮಹಿಳಾ ಖದೀಮರು ವ್ಯಾನಿಟಿ ಬ್ಯಾಗ್ ನಲ್ಲಿದ್ದ ಮೂರು ತೊಲೆಯ ಬಂಗಾರದ ಚೈನ್ ಕದ್ದು ಪರಾರಿಯಾದ ಘಟನೆ ನಗರದ ಹಳೇ ಬಸ್ ನಿಲ್ದಾಣದಲ್ಲಿ ಇಂದು ಸಂಜೆ ನಡೆದಿದೆ.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಕಲ್ಬುರ್ಗಿ ಬಸ್ ಗಾಗಿ ಕಾಯುತ್ತಾ ಕುಳಿತಿರುವಾಗ, ವ್ಯಾನಿಟಿ ಬ್ಯಾಗ್ ನಲ್ಲಿ ಚಿನ್ನದ ಸರ್ ಇಟ್ಟಿರುವದನ್ಮು ಗಮನಿಸಿ ಮೂವರು ಕಳ್ಳಿಯರು ಮಹಿಳೆಯ ಗಮನ ಬೇರಡೆ ಸೆಳೆಯುತ್ತಿದ್ದಂತೆ ಬ್ಯಾಗ್ ನಲ್ಲಿದ್ದ ಚಿನ್ನದ ಸರ್ ಹೊಡೆದು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದು, ನಿಲ್ದಾಣದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಇನ್ನೂ ಯಾವುದೇ ಪ್ರಕರಣ ದಾಖಲಾಗಿರುವದು ತಿಳಿದು ಬಂದಿಲ್ಲ.