ಪ್ರಮುಖ ಸುದ್ದಿ
ಮುಂದಿನ ಸಿಎಂ ಸಿದ್ರಾಮಯ್ಯ ಜಮೀರ್ ಹೇಳಿಕೆಗೆ ದೃವನಾರಾಯಣ ಆಕ್ಷೇಪ
ಜಮೀರ್ ಹೇಳಿಕೆಗೆ ದ್ರುವನಾರಾಯಣ ಆಕ್ಷೇಪ
ಮೈಸೂರಃ ವಿಧಾನಸಭೆ ಚುನಾವಣೆಗೆ ಸಾಕಷ್ಟು ಸಮಯವಿದ್ದು, ಈಗಲೇ ಮುಖ್ಯಮಂತ್ರಿಗಳ ಆಯ್ಕೆ ಕುರಿತು ಹೇಳಿಕೆ ನೀಡುವದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದೃವನಾರಾಯಣ ಜಮೀರ್ ಅಹ್ಮದ್ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಪದೇ ಪದೇ ಮುಂದಿನ ಮುಖ್ಯಮಂತ್ರಿ ಸಿದ್ರಾಮಯ್ಯ ಎಂದು ಹೇಳುತ್ತಿರುವದು ಅಪ್ರಸ್ತುತವಾಗಿದೆ.
ಜಮೀರ್ ಅವರು ನೀಡುವ ಈ ಹೇಳಿಕೆ ಕಾಂಗ್ರೆಸ್ ಏಕತೆಗೆ ಪೆಟ್ಟು ಬೀಳಲಿದೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣವಿಲ್ಲ. ಎಲ್ಲರೂ ಒಗ್ಹಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಇಂತಹ ಸಮುದಲ್ಲಿ ಜಮೀರ್ ಹೇಳಿಕೆ ಗೊಂದಲಕ್ಕೆ ಈಡು ಮಾಡುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.