ಪ್ರಮುಖ ಸುದ್ದಿ
ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದ ಸಾವು
![](https://vinayavani.com/wp-content/uploads/2022/01/Screenshot_20220129-125332_WhatsApp.jpg)
ಅರಣ್ಯದಲ್ಲಿ ಅನುಮಾನಾಸ್ಪದ ಮಹಿಳೆ ಸಾವು
ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದ ಸಾವು
ಚಿಕ್ಕಮಗಳೂರಃ ಕಳೆದ ಒಂದು ವರ್ಷದ ಹಿಂದೆಯೇ ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯೋರ್ವಳು ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ತಾಲೂಕಿನ ಜಡಗನಹಳ್ಳಿ ಗ್ರಾಮ ವ್ಯಾಪ್ತಿಯ ಅರಣ್ಯದಲ್ಲಿ ನಡೆದಿದೆ.
ಸುಮಾ ಎಂಬಾಕೆಯೇ ಸಾವನ್ನಪ್ಪಿದ ನವ ವಿವಾಹಿತೆಯಾಗಿದ್ದು, ಆಕೆಯ ಜೊತೆಗೆ ಪತಿ ಅಭಿಷೇಕ ಸಹ ಇದ್ದನು ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಸೂಕ್ತ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಠಾಣೆತಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತೀವ್ರ ತನಿಖೆಯ ನಂತರವೇ ಸತ್ಯಾಸತ್ಯತೆ ಬಯಲಾಗಲಿದೆ.