ಈಜು ಬಾರದ ಯುವಕರ ಸಾವು..!
ಈಜು ಬಾರದೆ ಸ್ನಾನಕ್ಕೆಂದು ಕೆರೆಗೆ ಇಳಿದ ಯುವಕರಿಬ್ಬರು ನೀರು ಪಾಲು
ಯಾದಗಿರಿ:- ಹೋಳಿ ಹುಣ್ಣಿಮೆ ಅಂಗವಾಗಿ ಗೆಳೆಯರೊಂದಿಗೆ ಬಣ್ಣದಾಟ ಆಡಿ ಗ್ರಾಮದ ಹೊರವಲಯದ ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಈಜು ಬರದೆ ಇಬ್ಬರು ಯುವಕರು, ಮೃತಪಟ್ಟ ಘಟನೆಯೂ ಯರಗೋಳ ಸಮೀಪದ ಬಾಚವಾರ ಗ್ರಾಮದಲ್ಲಿ ನಡೆದಿದೆ.
12 ಕ್ಕೂ ಹೆಚ್ಚು ಜನರ ಗುಂಪಿನ ಯುವಕರು, ಎಂದಿನಂತೆ ಹುಣ್ಣಿಮೆ ಅಂಗವಾಗಿ ಬಣ್ಣದಾಟ ಆಡಿಕೊಂಡು ಸ್ನಾನ ಮಾಡಲು ಗ್ರಾಮದ ಹೊರವಲಯದ ಕೆರೆಗೆ ಹೋಗಿದ್ದಾರೆ. ಯುವಕರಾದ ಮಾರ್ತಂಡಪ್ಪ(19), ಸಾಬಣ್ಣ( 18) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತ ಯುವಕ ಸಾಬಣ್ಣನ ದೇಹ ಪತ್ತೆಯಾಗಿದೆ, ಇನ್ನೊಂದು ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧನೆ ನಡೆಸುತ್ತಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
–ಸತೀಶ.ಎಸ್. ಮೂಲಿಮನಿ