ಪ್ರಮುಖ ಸುದ್ದಿ
ಹೊಟ್ಟೆನೋವು ತಾಳದೆ ಬಾಲಕಿ ಆತ್ಮಹತ್ಯೆ
ಹೊಟ್ಟೆನೋವು ತಾಳದೆ ಬಾಲಕಿ ಆತ್ಮಹತ್ಯೆ
ಸೊರಬಃ ಹೊಟ್ಟೆ ನೋವು ತಾಳಲಾಗದೆ ಬಾಲಕಿಯೋರ್ವಳು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ನಡೆದಿದೆ.
ನಾಗರಾಜ ಮರಡಿ ಎಂಬುವರ ಮಗಳಾದ ಸುಚಿತ್ರಾ(17) ಎಂಬ ಬಾಲಕಿಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಬಾಲಕಿ ಪಿಯುಸಿ ಓದುತ್ತಿದ್ದು, ಕಳೆದ ಹಲವು ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳಿತ್ತಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು ಎನ್ನಲಾಗಿದೆ.
ನಿನ್ನೆ ಕುಟುಂಬಸ್ಥರು ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆಗ ಬಾಲಕಿಗೆ ಹೊಟ್ಟೆ ನೋವು ತೀವ್ರತೆ ಕಾಣಿಸಿಕೊಂಡಿದ್ದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಕುರಿತು ಸೊರಬ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.