Homeಪ್ರಮುಖ ಸುದ್ದಿ
ಆನ್ ಲೈನ್ ವಂಚನೆಯಿಂದ 1.60 ಕೋಟಿ ರೂ ಕಳೆದುಕೊಂಡ ಮಂಗಳೂರಿನ ವ್ಯಕ್ತಿ
ಮಂಗಳೂರು: ಅಂತರಾಷ್ಟ್ರೀಯ ಕೊರಿಯರ್ ಕಂಪೆನಿ ಫೆಡೆಕ್ಸ್ ಹೆಸರಿನಲ್ಲಿ ದೊಡ್ಡ ವಂಚನೆ ಪ್ರಕರಣದ ಜಾಲ ನಡೆಯುತ್ತಿದ್ದು, ಈಗಾಗಲೇ ಹಲವಾರು ಜನ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ.
ಅದೇ ರೀತಿ ಮಂಗಳೂರಿನಲ್ಲಿ ಒಂದು ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರಿಂದ ಸಿಬಿಐನ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ‘ನಿಮ್ಮ ಹೆಸರಲ್ಲಿ ಥಾಯ್ಲೆಂಡಿಗೆ ಕಳುಹಿಸಲಾದ ಪಾರ್ಸೆಲ್ ನಲ್ಲಿ ಮಾದಕ ಪದಾರ್ಥ ಪತ್ತೆಯಾಗಿದೆ ಎಂದು ಹೇಳಿ ಬೆದರಿಸಿ 1.60 ಕೋಟಿ ಹಣವನ್ನು ಪಡೆದು ಘಟನೆ ನಡೆದಿದು, ಸೈಬರ್ ಕ್ರೈಂ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.