ದಾನ ಮಾಡಿದರೆ ಹೀಗೆ ಮಾಡ ಬೇಕು..
ದಾನ ಮಾಡಿದರೆ ಹೀಗೆ ಮಾಡ ಬೇಕು.
ನಮ್ಮ ಭಾರತದ ಇತಿಹಾಸದಲ್ಲಿ , ಕಥೆ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿ ಹೊಸಿದು ಬಂದಿದೆ . ಕೇವಲ ನೀತಿ ಕಥೆಯಾಗದೆ ಅವುಗಳು ಜನರಿಗೆ ದಾರಿ ದೀಪ ವಾಗಿವೆ . ತೆನಾಲಿ ರಾಮನ ಕಥೆಗಳು ಪಂಚ ತಂತ್ರ ಕಥೆಗಳು, ಜಾತಕದ ಕಥೆಗಳು, ಅಕ್ಬರ್ ಬೀರಬಲ್ ಕಥೆಗಳು, ಹೀಗೆ ಹಾಗೆ ಹಲವಾರು ತರಹದ ಕಥೆಗಳು ಜನರನ್ನು ಮನರಂಜಿಸಿದೆ , ಮತ್ತು ಮನರಂಜಿಸುತ್ತ ಬಂದಿವೆ. ಇನ್ನು ಮುಂದೆಯೂ ಅವುಗಳ ಅವಶ್ಯ ಕಥೆ ಬಹಳವಿದೆ.
ರಾತ್ರಿ ಮಲಗುವಾಗ ಮಕ್ಕಳಿಗೆ ಕಥೆ ಹೇಳಿ ಮಲಗಿಸಿವುದು ಸರ್ವೇ ಸಾಮನ್ಯ. ನಮ್ಮ ಭಾರತದ ಕಥೆಗಳ ಮುಂದೆ , ಹ್ಯಾರಿ ಪೊಟ್ಟರ್ ಕಥೆಗಳು ಯಾವ ಸರಿಸಮಾನಕ್ಕು ಬರುವುದಿಲ್ಲ ಅನ್ನುವುದನ್ನು ನಮ್ಮ ಭಾರತೀಯನು ಅರಿತಿದ್ದಾನೆಯೇ ?
ಈ ಕಥೆ , ಅಲ್ಲ ಇದು ನಿಜವಾಗಿಯು ನಡೆದ ಘಟನೆ , ಶ್ರೀ ಬಾಲ ಗಂಗಾಧರ ತಿಲಕರ ಕಾಲದಲ್ಲಿ , ಅವರ ಮನೆಯಲ್ಲೇ ನಡೆದ ಘಟನೆ . ಕೊಟ್ಟು ಹುಟ್ಟಿರಬೇಕು ಜೀವನದಲ್ಲಿ, ನಮ್ಮ ದೇಶ ಅತಿಥಿ ಸತ್ಕಾರಕ್ಕೆ ಹೆಮ್ಮೆ ತರುವ ದೇಶ . ಅದಕ್ಕೆ ಬಹು ಮಾನ್ಯತೆ ಕೊಡುವುದು ಸಹಜ ಗುಣ ನಮ್ಮ ಭಾರತೀಯನದು . ಅನಾದಿ ಕಾಲ ದಿಂದಲೂ ನಡೆದ ಬಂದಿದೆ. ಅತಿಧಿ ದೇವೋ ಭವ ಎಂದು ಆ ದಿನ ಭೋಜನ ಬಡಿಸಿ ಇಲ್ಲ ಭಿಕ್ಷೆ ನೀಡಿ ನಂತರವೇ ತಮ್ಮ ಭೋಜನ ಮಾಡುವುದು ನಿತ್ಯದಿನಚರಿ.
ಆಗಿನ ಕಾಲದಲ್ಲಿ , ಈಗಿನ ತರಹ ಕಬ್ಬಿಣದ ಕಪಾಟು ಇಲ್ಲ ತಿಜೋರಿ ಇರುತ್ತಿರಲಿಲ್ಲ . ಹಾಗಾಗಿ ನಗ ನಾಣ್ಯಗಳನ್ನು, ಒಡವೆಗಳನ್ನು ಅಕ್ಕಿ ಡಬ್ಬದಲ್ಲಿ ಇಲ್ಲ ಧಾನ್ಯವನ್ನು ಶೇಕರಿಸುವ ದೊಡ್ಡ ದೊಡ್ಡ ಡಬ್ಬಿಗಳಲ್ಲಿ ಶೇಕರಿಸುತಿದ್ದರು.
ಆ ದಿನ ಬೆಳಗ್ಗೆ ತಿಲಕರ ಮನೆಗೆ ಒಬ್ಬ ಭಿಕ್ಷುಕ ಭವತಿ ಭಿಕ್ಷಾಂದೇಹಿ ಎಂದು ಬೇಡುವುದಕ್ಕೆ ಬಂದ . ಭಿಕ್ಷೆ ಹಾಕುವಾಗ ಮನೆಯ ಸೊಸೆ ಅಕ್ಕಿ ಡಬ್ಬದಲ್ಲಿ ಇಟ್ಟಿದ್ದ ಮುತ್ತಿನ ಮೂಗುತ್ತಿಯನು ಕೂಡ ಅಕ್ಕಿಯ ಜತೆಗೆ ಭಿಕ್ಷುಕನ ಪಾತ್ರೆಗೆ ಹಾಕಿ ಬಿಡುತ್ತಾಳೆ.
ಭಿಕ್ಷೆ ಹಾಕಿದ ಸೊಸೆಗೂ , ಭಿಕ್ಶುಕನಿಗೂ ಏನು ಮಾಡುವುದು ತಿಳಿಯದೆ ಇಬ್ಬರೂ ಮೂಕರಾಗಿ ಒಬ್ಬರನ್ನೊಬ್ಬರು ನೋಡುತ್ತಾ ನಿಂತು ಬಿಟ್ಟರು. ಸೊಸೆಗೆ ಕೊಟ್ಟ ಮೂಗತಿಯನ್ನು ಹೇಗೆ ವಾಪಸ್ಸು ಕೇಳುವುದು , ಎಂಬ ಸಂಕೋಚ ಭಿಕ್ಷುಕನಿಗೆ ಆ ಮೂಗುತಿಯನ್ನು ವಾಪಸ್ಸು ಕೊಟ್ಟರೆ ಮನೆಯ ಒಡತಿ ತಪ್ಪಾಗಿ ತಿಳಿದು ಕೊಂಡರೆ ಎಂಬುವ ಭಯ .
ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ನಿಂತು ಬಿಟ್ಟರು. ಅಷ್ಟರಲ್ಲಿ ಅಲ್ಲಿಗೆ ಬಂದ ಗಂಗಾಧರ ತಿಲಕರು, ಇವರಿಬ್ಬರ ಸಮಸ್ಯೆಯನ್ನು ಅರಿತು ಕೊಂಡು , ನೋಡಮ್ಮ ನೀನು ಮೂಗತಿಯನು ದಾನ ಮಾಡಿ ಆಯಿತು . ಅದು ಯಾರಿಗೆ ಸೇರ ಬೇಕೋ ಅವರಿಗೆ ಸೇರಿದೆ . ಆ ಭಿಕ್ಷುಕನಿಗೆ ಈಗ ಅದರ ಮೇಲೆ ಹಕ್ಕು. ಆ ಭಿಕ್ಷುಕನಿಗೆ ಆ ಮೂಗತಿಯ ಮೇಲೆ ಈಗ ಹಕ್ಕು ಅವನನ್ನು ತೆಗೆದು ಕೊಂಡು ಹೋಗಲು ಹೇಳು ಎಂದು ಸಮಸ್ಯೆ ಬಗೆ ಹರಿಸಿದರು.
ಇದು ಭಾರತೀಯನ ಸಂಸ್ಕೃತಿ . ಇದು ಭಾರತೀಯನ ಉದಾರತೆ. ಇದು ಭಾರತದಲ್ಲಿ ಮಾತ್ರ ಸಧ್ಯ. ಪಶ್ಚಿಮ ದೇಶಗಲ್ಲಿ ಹಣ ಹಣ ಮಾಡುವುದು, ತಾನು ಮೊದಲು ಬದುಕ ಬೇಕು , ತಮ್ಮ ಮುಂದಿನ ಭವಿಷ್ಯ ಮುಖ್ಯ, ಸ್ವಾರ್ಥತೆ ಹೆಚ್ಚಿ , ಇಂತಹ ವಿಚಾರ ಮನಸ್ಸಿಗೆ ಬರುವುದು ಕಷ್ಟ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882