
ದಿನಕ್ಕೊಂದು ಕಥೆ
ತಿಮ್ಮಪ್ಪನಿಗೆ ಒಡೆದ ಮಡಕೆಯಲ್ಲಿ ಮಾಡಿದ ಪ್ರಸಾದದ ನೈವೇದ್ಯ
ತಿರುಪತಿ ತಿಮ್ಮಪ್ಪನಿಗೆ ನಿತ್ಯವೂ ಹಲವು ರೀತಿಯ ವಿವಿಧ ಬಗೆಯ ಅನ್ನ, ಸಿಹಿತಿಂಡಿಗಳು ಸೇರಿದಂತೆ ಅನೇಕ ರೀತಿಯ ಭೋಜ್ಯಗಳ ನೈವೇದ್ಯ ಮಾಡಲಾಗುತ್ತದೆ. ಪ್ರತಿ ನೈವೇದ್ಯವನ್ನು ಒಂದೊಂದು ವಿಶೇಷ ಆರಾಧನೆ ಮೂಲಕ ನಿವೇದಿಸುವುದು ವಾಡಿಕೆ. ವಿಶೇಷ ದಿನಗಳಲ್ಲಿ ಪುಳಿಯೋಗರೆ, ಸಿಹಿಪೊಂಗಲ್, ಹೋಳಿಗೆ, ಹೀಗೆ ಹಲವು ಪ್ರಸಾದಗಳನ್ನು ನೈವೇದ್ಯ ಮಾಡಲಾಗುತ್ತದೆ. ಒಂದೊಂದು ವಾರದಲ್ಲಿ ಒಂದೊಂದು ಪ್ರಸಾದವನ್ನು ಆಗಮ ಶಾಸ್ತ್ರದ ಅನ್ವಯ ನೈವೇದ್ಯ ಅರ್ಪಿಸಲಾಗುತ್ತದೆ.
ನಿತ್ಯ ಪ್ರಸಾದವೂ ಅನ್ನಪ್ರಸಾದ ಒಳಗೊಂಡಿರುತ್ತವೆ. ಅನೇಕ ಪ್ರಸಾದದ ಬಟ್ಟಲವಿದ್ದರೂ ಒಂದು ಪ್ರಸಾದವನ್ನು ಮಾತ್ರ ನಿವೇದಿಸಲಾಗುತ್ತದೆ. ಅದು ಯಾವ ಪ್ರಸಾದ? ಆ ಪ್ರಸಾದ್ ಓಡು ಪ್ರಸಾದ. ಓಡ ಎಂದರೇ ಒಡೆದ ಮಣ್ಣಿನ ಮಡಿಕೆ. ಅಸಲಿಗೆ ಒಡೆದ ಮಡಕೆಯಲ್ಲಿ ದೇವರಿಗೆ ಪ್ರಸಾದ ಏಕೆ ಎಂದು ತಿಳಿಯುವ ಮೊದಲು ತೊಂಡಮಾನ್ ಚಕ್ರವರ್ತಿಯ ಬಗ್ಗೆ ತಿಳಿದುಕೊಳ್ಳಬೇಕು. ತೊಂಡಮಾನ್ ಚಕ್ರವರ್ತಿ ತಿಮ್ಮಪ್ಪನ ಅತ್ಯಂತ ಪ್ರಿಯ ಭಕ್ತ. ಆತ ಶ್ರೀ ವೆಂಕಟೇಶ್ವರ ಸ್ವಾಮೀಯವರ ಕಿರಿಯ ಮಾವ. ರಾಜ ತೊಂಡಮಾನ್ ಅಪಾರ ಹೆಮ್ಮೆ ಹಾಗೂ ಭಕ್ತಿಯನ್ನು ಹೊಂದಿದ್ದ.
ಒಮ್ಮೆ ಆತನಿಗೆ ತನಗಿಂತ ದೊಡ್ಡ ಭಕ್ತನಿಲ್ಲ ಎಂಬ ಅಹಂಕಾರ ಭಾವನೆ ಬರುವುದು. ಸ್ವಾಮೀಗೆ ಯಾವಾಗಲೂ ಚಿನ್ನದ ಹೂವುಗಳಿಂದ ಪೂಜಿಸುತ್ತಿದ್ದ. ತನ್ನಂತೆ ಬಂಗಾರದ ಹೂಗಳಿಂದ ಪೂಜಿಸುವವರು ಯಾರೂ ಇಲ್ಲ ಎಂಬ ಹೆಮ್ಮೆ ಅಭಿಮಾನ ಪಡುತ್ತಿದ್ದ. ಆದರೆ ಒಮ್ಮೆ ಪೂಜೆ ವೇಳೆ ಶ್ರೀ ತಿಮ್ಮಪ್ಪನ ಪಾದದ ಬಳಿ ಮಣ್ಣಿನ ಹೂವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಮಣ್ಣಿನ ಹೂವುಗಳು ಹೇಗೆ ಬಂದವು ಎಂದು ತೊಂಡಮಾನ್ ಚಕ್ರವರ್ತಿ ಕೋಪಗೊಂಡು ತನ್ನ ಮಂತ್ರಿಗಳನ್ನು ಕೇಳ್ತಾನೆ.
ಆ ಮಣ್ಣಿನ ಹೂವುಗಳು ಹೇಗೆ ಬಂದವು ಎಂದು ತಿಳಿಯಬೇಕೆಂದು ಅವನು ಹೇಳುತ್ತಾನೆ. ಆದರೆ ಆ ಮಣ್ಣಿನ ಹೂವುಗಳ ಬಗ್ಗೆ “ಕುಂಬಾರನ ತೋಟದಲ್ಲಿ ಒಬ್ಬ ಕುಂಬಾರ ಸೇವಕನಿದ್ದನು. ಸ್ವಾಮಿಯಲ್ಲಿ ಅಚಲ ಭಕ್ತಿ ಹೊಂದಿರುವ ಕುಂಬಾರ ದಾಸ. ಬಂಗಾರದ ಹೂಗಳನ್ನು ಪೂಜಿಸುವ ಶಕ್ತಿ ಇಲ್ಲದ ಕುಂಬಾರ ತನ್ನ ಮನೆಯಲ್ಲಿ ಮಣ್ಣಿನ ಹೂಗಳಿಂದ ಭಗವಂತನನ್ನು ಪೂಜಿಸುತ್ತಾನೆ” ಎಂದು ತೊಂಡಮಾನನಿಗೆ ಶ್ರೀವೆಂಕಟೇಶ್ವರನೇ ಹೇಳುತ್ತಾನೆ. ಕುಂಬಾರ ದಾಸರ ಮನೆಯಲ್ಲಿ ಅರ್ಪಿಸಿದ ಪುಷ್ಪಗಳನ್ನು ಗರ್ಭಗುಡಿಯಲ್ಲಿರುವ ಭಗವಂತನ ಪಾದದಲ್ಲಿ ಬೆಳಗಲಾಗುತ್ತದೆ. ನಂತರ ತಿಮ್ಮಪ್ಪ, ತೊಂಡಮಾನ ಚಕ್ರವರ್ತಿ ಬಳಿ ಕುಂಬಾರ ನಿನಗಿಂತ ದೊಡ್ಡ ಭಕ್ತ. ಆ ಕುಂಬಾರ ತಯಾರಿಸಿದ ಪಾತ್ರೆಯಲ್ಲಿಯೇ ಪ್ರಸಾದ ಸ್ವೀಕರಿಸುವುದಾಗಿ ತಿಮ್ಮಪ್ಪ ಹೇಳ್ತಾನೆ. ಅಂದನಿಂದ ಒಂದು ಮಡಿಕೆಯನ್ನು ತೆಗೆದುಕೊಂಡು ಮೇಲ್ಭಾಗವನ್ನು ಒಡೆದು, ಕೆಳಭಾಗದಲ್ಲಿ ಎಲೆ ಹಾಕಿ ಪ್ರಸಾದವನ್ನು ನೈವೇದ್ಯವಾಗಿ ಅರ್ಪಿಸುತ್ತಾನೆ.
ಕಾಲ ಕಳೆದಂತೆ ಓಡು ತಯಾರಿಸುವ ವ್ಯವಸ್ಥೆಯ ಕೊರತೆಯ ಕಾರಣದಿಂದ ಓಡು ಬಳಕೆ ಮಾಡುವುದು ಕಡಿಮೆಯಾಯ್ತು. ಆದರೆ ಇಂದಿಗೂ ಗರ್ಭಗುಡಿಯಲ್ಲಿ ನೀಡುವ ಪ್ರಸಾದವನ್ನು ಓಡು ಪ್ರಸಾದ ಎಂದು ಕರೆಯಲಾಗುತ್ತದೆ. ಇದರಲ್ಲಿ ಅನ್ನ, ಹಾಲಿನ ಕೆನೆ, ಅನ್ನ ಪ್ರಸಾದವನ್ನು ನೀಡಲಾಗುತ್ತದೆ. ಇದು ಕೇವಲ ಒಂದು ಆಚರಣೆಯಲ್ಲ, ಆದರೆ ಭಕ್ತಿಯ ಸಂಕೇತವಾಗಿದೆ.
🖊️ಸಂಗ್ರಹ🖋️
*ಡಾ.ಈಶ್ವರಾನಂದ ಸ್ವಾಮೀಜಿ.*
📞 – 9341137882.