ಕಥೆ

ಇದು ಪುರುಷ ಸಮಾಜವಾ.? ಹಾಗಾದರೆ ಈ ಕಥೆ ಓದಿ

ದಿನಕ್ಕೊಂದು ಕಥೆ

ಹೆಂಡತಿಯ ಮಾತನ್ನು ಕೇಳದ ಗಂಡಂದಿರು ಇದ್ದಾರಾ ?

ಒಬ್ಬ ರಾಜ ಇದ್ದ. ಆತನಿಗೆ ಒಂದು ಸಮಸ್ಸೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸಾಯಿತು.

“ನಮ್ಮ ರಾಜ್ಯದಲ್ಲಿ ಎಷ್ಟು ಜನ ಗಂಡಂದಿರು ಹೆಂಡತಿಯರ ಗುಲಾಮರಿದ್ದಾರೆ?” ಎಂದು ತಿಳಿದುಕೊಳ್ಳುವ ಬಗ್ಗೆ ಒಂದು ಪಂದ್ಯ ಇಟ್ಟನು.

ರಾಜ ಸಭಾಂಗಣದ ಒಂದು ಕಡೆ ಸೇಬು ಹಣ್ಣುಗಳನ್ನು ಮತ್ತು ಒಂದು ಕಡೆ ಕುದುರೆಗಳನ್ನು ಕಟ್ಟಿದನು.

ಯಾರು ಹೆಂಡತಿಯರ ಗುಲಾಮರೋ ಅವರು ಸೇಬು ತೆಗೆದುಕೊಳ್ಳಿ ಮತ್ತು ಯಾರು ನಿಮ್ಮ ಸ್ವತಃ ನಿರ್ದಾರ ತೆಗೆದುಕೊಳ್ಳುವಿರೋ ಅವರು ತಮಗಿಷ್ಟವಾದ ಕುದುರೆಗಳನ್ನು ತೆಗೆದುಕೊಳ್ಳಿ ಎಂದನು.

ಜನಗಳೆಲ್ಲ ಬಂದ್ರು ಎಲ್ಲರೂ ಸೇಬು ಹಣ್ಣನ್ನೇ ತೆಗೆದುಕೊಂಡು ಹೋದರೆ ಹೊರತು ಒಬ್ಬರಾದರೂ ಕುದುರೆಯ ಹತ್ತಿರ ಯಾರೂ ತಿರುಗಿ ಕೂಡಾ ನೋಡಲೇ ಇಲ್ಲಾ.

ರಾಜಾ ಚಿಂತಾಕ್ರಾಂತನಾದನು.
ಹೆಂಡತಿಯರ ಮಾತು ಕೇಳದೇ ಇರುವವರು ಒಬ್ಬರೂ ಇಲ್ಲವೇ ಈ ನನ್ನ ರಾಜ್ಯದಲ್ಲಿ ಎಂದುನು.

ಅಷ್ಟರಲ್ಲಿ ಒಬ್ಬ ಮಹಾ ಬಲಶಾಲಿ ವ್ಯಕ್ತಿ ಬಂದನು. ನೋಡಲು ಆಳೆತ್ತರ ವ್ಯಾಘ್ರ ಲಕ್ಷಣದ ಮುಖದವನಾಗಿದ್ದನು. ಅವನು ಬಂದವನೇ ಕುದುರೆಯನ್ನು ತೆಗೆದುಕೊಳ್ಳಲು ಹೋದನು. ಆಗ ರಾಜ “ಹೇ ಗಂಡುಗಲಿ, ನಿನಗೆ ಯಾವ ಕುದುರೆ ಬೇಕೋ ಆ ಕುದುರೆಯನ್ನು ತೆಗೆದುಕೊಂಡು ಹೋಗು” ಎಂದನು. ಆತ ಕಪ್ಪು ಬಣ್ಣದ ಬಲಿಷ್ಠ ಕುದುರೆಯನ್ನು ತೆಗೆದು ಕೊಂಡು ಹೋದನು.

ಈ ಕಾರ್ಯಕ್ರಮ ಸಂಜೆಯತನಕ ನಡೆಯಿತು. ಆದರೆ ಬೇರೆ ಯಾರೂ ಕುದುರೆಯನ್ನು ತೆಗೆದುಕೊಳ್ಳಲು ಬರಲೇಯಿಲ್ಲ. ಸಂಜೆ ಹೊತ್ತಿಗೆ ಇನ್ನೇನು ಪಂದ್ಯ ಮುಕ್ತಾಯವಾಗುವ ಹೊತ್ತಿನಲ್ಲಿ ಅದೇ ಆ ಬಲಿಷ್ಠ, ಬಲಶಾಲಿ ವ್ಯಕ್ತಿ ಕುದುರೆಯನ್ನು ವಾಪಸ್ ತೆಗೆದುಕೊಂಡು ಬಂದನು.
ರಾಜ ಕೇಳಿದ, “ಏಕೆ ನಿನಗೆ ಇನ್ನೊಂದು ಕುದುರೆ ಬೇಕಾ ವೀರಾ..?” ಎಂದನು.

ಅದಕ್ಕೆ ಆ ಮಹಾಬಲಶಾಲಿ ವ್ಯಕ್ತಿ ಹೇಳಿದ, ಇಲ್ಲ ಮಹಾಪ್ರಭು ನನ್ನ ಹೆಂಡತಿ ಈ ಕಪ್ಪು ಕುದುರೆ ಬೇಡ ಎಂದಳು. ಕಪ್ಪು ಬಣ್ಣ ಅಶುಭ ಅಂತೆ, ಅದಕ್ಕೇ ಅವಳು ಹೇಳಿದ ಹಾಗೆ ನಾನು ಬಿಳಿಯ ಕುದುರೆಯನ್ನು ಒಯ್ಯಲು ಬಂದಿದ್ದೇನೆ ಎಂದನು.

ರಾಜನಿಗೆ ಕೋಪ ಬಂದಿತು. ಥೂ ರಣಹೇಡಿ, ಹೆಂಡತಿಯ ಗುಲಾಮ, ನಾಚಿಕೆ ಆಗಬೇಕು ನಿನಗೆ, ಈ ನಿನ್ನ ಬಲಿಷ್ಠ, ಬಲಾಢ್ಯವಾದ ದೇಹದಾಡ್ಯಕ್ಕೆ, ಒಂದ್ ಆಪಲ್ ತಗೊಂಡ್ ಹೋಗು ಎಂದು ಜೋರಾಗಿ ಕಿರುಚಿದನು.

ಅಂದಿನ ಸಭೆ ಮುಗಿಯಿತು. ಮದ್ಯರಾತ್ರಿ ಮಹಾಮಂತ್ರಿ ರಾಜನ ಕೋಣೆಯ ಬಾಗಿಲು ತಟ್ಟಿದನು. ಮಹಾರಾಜ ಏನಾಯ್ತು? ಎಂದು ಕೇಳಿದನು.

ಮಹಾಮಂತ್ರಿ, ಮಹಾರಾಜಾ ನಾವು ಕುದುರೆ ಬದಲು ವಜ್ರ ವೈಡೂರ್ಯ ಏನಾದ್ರು ಇಟ್ಟಿದ್ರೆ ಯಾರಾದ್ರೂ ಒಯ್ಯೊಕೆ ಬರ್ತಿದ್ರೋ ಏನೋ ಅಲ್ಲವೇ.? ಎಂದಾಗ ಮಹಾರಾಜ, ನಾನೂ ಅದನ್ನೇ ಇಡಬೇಕು ಅಂತ ಮಾಡಿದ್ದೆ, ಆದರೆ ಇವ್ಳು ಬ್ಯಾಡ ಅಂದ್ಬಿಟ್ಲು.

ಮಹಾಮಂತ್ರಿ, ಹೌದಾ? ಹಾಗಾದ್ರೆ ನಿಮಗೂ ಸೇಬು ಕೊಡಬೇಕು ಅನ್ನಿ.

ಮಹಾರಾಜ (ನಗುತ್ತಾ) :- ಅದೇನೋ ಸರಿ, ನೀವು ಇಷ್ಟೋತ್ತಲ್ಲಿ ಯಾಕ್ ಕೇಳೋಕೆ ಬಂದ್ರಿ ಹಗಲೊತ್ತೆ ಕೇಳಬಹುದಿತ್ತಲ್ವಾ ?

ಮಹಾಮಂತ್ರಿ:- ಈ ಪ್ರಶ್ನೆ ನನಗೆ ಹೊಳೆದಿದ್ದಲ್ಲ, ನನ್ ಹೆಂಡ್ತಿ ಹೇಳಿದ್ಳು, ಇವಾಗ್ಲೇ ಹೋಗಿ ಕೇಳ್ಕೊಂಡ್ ಬನ್ರೀ ಅಂತ.

ಮಹಾರಾಜ :- ಹಾಗಾದ್ರೆ ನಿಮಗೆ ಒಂದು ಲಾರಿ ಲೋಡ್ ಭರ್ತಿ ಸೇಬುಗಳನ್ನೇ ಕಳಿಸಬೇಕು ಬಿಡಿ ಎಂದನು.

ನೀತಿ :– ನಮ್ಮದು ಪುರುಷ ಸಮಾಜವೇನೋ ನಿಜ. ಆದರೆ ಹೆಂಡತಿಯರ ಮಾತು ಕೇಳದ ಪುರುಷನಿಲ್ಲ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button