ಹಾಲಿನವನಿಗೆ ನ್ಯಾಯ ಒದಗಿಸಿದ ಕೋತಿ
ದಿನಕ್ಕೊಂದು ಕಥೆ
ನೀರಿನ ದುಡ್ಡು ನೀರಿಗೆ
ರಾಮಯ್ಯನ ಬಳಿ ಆರು ಹಸುಗಳಿದ್ದುವು. ಹಸುಗಳು ಬೇಕಾದಷ್ಟು ಹಾಲು ಕೊಡುತ್ತಿದ್ದುವು. ಆದರೂ ಚೆನ್ನಾಗಿ ನೀರು ಬೆರೆಸಿ ಹಾಲು ಮಾರುತ್ತಿದ್ದ. ಒಂದು ದಿನ ಎಲ್ಲರ ಮನೆಯಿಂದಲೂ ಹಣ ವಸೂಲು ಮಾಡಿಕೊಂಡು ಚೀಲದಲ್ಲಿ ತುಂಬಿಕೊಂಡು ಬರುತ್ತಿದ್ದ . ಎಲ್ಲಿಂದಲೋ ಒಂದು ಕೋತಿ ಬಂದು ಇವನ ಚೀಲವನ್ನು ಎಗರಿಸಿಕೊಂಡು ಓಡಿ ಹೋಯಿತು.
ಇವನು ಗಾಬರಿಯಿಂದ ಆ ಕೋತಿಯ ಹಿಂದೇನೇ ಓಡತೊಡಗಿದ. ಆ ಕೋತಿಯಾದರೋ, ಮರದಿಂದ ಮರಕ್ಕೆ ಹಾರುತ್ತಿತ್ತು. ಇವನೂ ಕೂಡಾ ಅದರ ಹಿಂದೇನೇ ಓಡುತ್ತಿದ್ದ. ಆ ಕೋತಿ ಓಡಿ ಹೋಗಿ ನದಿ ತೀರದ ಒಂದು ಮರದ ಮೇಲೆ ಕುಳಿತುಕೊಂಡು ಸುಧಾರಿಸಿಕೊಳ್ಳತೊಡಗಿತು. ನಿಧಾನವಾಗಿ ಚೀಲ ತೆಗೆಯಿತು. ಒಂದು ರೂಪಾಯಿ ತೆಗೆದು ನೆಲಕ್ಕೆ , ಒಂದು ರೂಪಾಯಿ ನೀರಿಗೆ … ಹೀಗೆ ಹಾಕುತ್ತಲೇ ಹೋಯಿತು. ಅಂತೂ ಚೀಲ ಖಾಲಿ ಮಾಡಿತು.
ಆ ಗುಂಪಿನಲ್ಲಿದ್ದ ಒಬ್ಬ ಹಿರಿಯರು ಆಗ ನುಡಿದರು “ರಾಮಯ್ಯ, ನೀನು ಅರ್ಧ ನೀರು, ಅರ್ಧ ಹಾಲು ಸೇರಿಸಿ ಮಾರಾಟ ಮಾಡುತ್ತಿದ್ದಿ. ಹಾಲಿನ ದುಡ್ಡು ನಿನಗೆ, ನೀರಿನ ದುಡ್ಡು ನೀರಿಗೆ ಕೋತಿ ಹಂಚಿ ನ್ಯಾಯ ಒದಗಿಸಿತು. ಇನ್ನು ಮೇಲಾದರೂ ಪ್ರಾಮಾಣಿಕತನದಿಂದ ವ್ಯಾಪಾರ ಮಾಡಯ್ಯಾ” ಎಂದೇ ಬುದ್ಧಿವಾದ ಹೇಳಿದರು.
ನೀತಿ :– ಹಣ ಸಂಪಾದಿಸಲು ಮೋಸ ಮಾಡಿದರೆ ದೇವರು ಯಾವುದೋ ಒಂದು ರೂಪದಲ್ಲಿ ಬಂದು ಪಾಠ ಕಲಿಸುವನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.