ಕಥೆ

ದೇವರ ವರ ದುರಾಸೆಯ ದಂಪತಿಗೆ ಕಲಿಸಿದ ಪಾಠ

ದುರಾಸೆಯ ಫಲ

ಒಂದೂರಿನಲ್ಲಿ ಬಡವನಿದ್ದ. ಆತ ನಿಷ್ಠಾವಂತ ದೈವಭಕ್ತ, ಆಪ್ತತೆಯಿಂದಲೇ ದೇವರನ್ನು ಕರೆಯುವಾಗ ಒಮ್ಮೆ ದೇವರೇ ಪ್ರತ್ಯಕ್ಷನಾದ. “ನಿನ್ನ ಭಕ್ತಿಗೆ ಮೆಚ್ಚಿರುವೆ. ಮೂರು ಕವಡೆ ಕೊಡುವೆ. ನಿನ್ನ ಪತ್ನಿಯೊಂದಿಗೆ ವಿಚಾರ ವಿನಿಮಯಮಾಡು. ನೀವಿಬ್ಬರೂ ಯೋಚಿಸಿ ಬೇಕಾದ ವರವನ್ನೇ ಬೇಡಿ ಕವಡೆ ಎಸೆದರೆ ಸಾಕು, ನಿನ್ನ ಇಷ್ಟಾರ್ಥ ಈಡೇರುತ್ತದೆ. ನೆನಪಿರಲಿ ಮೂರು ಕವಡೆಗೆ ಮೂರೇ ವರ, ಚೆನ್ನಾಗಿ ಯೋಚಿಸು. ದುಡುಕದಿರು” ಎಂದ.

ಹೆಂಡತಿಯೊಡನೆ ಬಂದು ವಿಚಾರಿಸಿದ. ಆಕೆ ಹೇರಳ ಸಂಪತ್ತು ಬೇಕೆಂದಳು ಆದರೆ ಈತ ಸುತರಾಂ ಒಪ್ಪಲಿಲ್ಲ. ಮೊದಲಿಗೆ ನಮ್ಮಿಬ್ಬರ ಮೂಗುಗಳು ಚಪ್ಪಟೆಯಾಗಿವೆ. ಜನರು ನಮ್ಮನ್ನು ನೋಡಿ ನಗುತ್ತಿದ್ದಾರೆ. ಹಾಗೆಂದೇ ಒಳ್ಳೆಯ ಮೂಗುಗಳನ್ನು ಕೇಳೋಣ’ ಎಂದ.

ದೇವರೇ ನನಗೆ ಒಳ್ಳೆಯ ಮೂಗು ಕೊಡು’ ಎಂದು ಮೊದಲನೆಯ ಕವಡೆ ಎಸೆದ. ದೇಹದ ತುಂಬ ಸುಂದರವಾದ ಮೂಗುಗಳೇ ಹರಡಿದವು. ತಕ್ಷಣವೇ ಹೌಹಾರಿದರಿಬ್ಬರು. ದೇವರೇ ದೇಹದಲ್ಲೆಲ್ಲ ಮೂಗುಗಳು ಬೇಡ ಎಂದು ಎರಡನೆಯ ಕವಡೆ ಎಸೆದನು. ತಕ್ಷಣವೇ ಇರುವ ಚಪ್ಪಟೆ ಮೂಗಿನೊಂದಿಗೆ ಎಲ್ಲವೂ ಮಾಯವಾಯಿತು.

ಈಗ ಮೂಗೇ ಇಲ್ಲದೆ ಜನರಿಗೆಲ್ಲ ಮುಖ ತೋರಿಸುವುದು ಹೇಗೆ? ಜನರು ಕಾರಣ ಕೇಳಿದರೆ ಸತ್ಯ ಹೇಳಲೇಬೇಕಾಗುತ್ತದೆ. ಆಗ ಜನರು ನಮ್ಮ ಮೂರ್ಖತನವನ್ನು ಕಂಡು ನಗುತ್ತಾರೆ. ಆಗ ವಿಪರೀತ ಅವಮಾನವಾಗುತ್ತದೆ.

ಹೀಗೆಂದು ಯೋಚಿಸುತ್ತಲೇ ಕೈಜೋಡಿಸಿಕೊಂಡು ಬೇಡಿದ ಬಡವ ‘ಹೇ ದೇವರೇ, ನಮಗೆ ಮೊದಲಿನಂತೇನೇ ಚಪ್ಪಟೆ ಮೂಗನ್ನೇ ದಯಪಾಲಿಸು’ ಎಂದು ಹೇಳಿ ಉಳಿದ ಇನ್ನೊಂದು ಕವಡೆಯನ್ನು ಎಸೆದ. ಮೊದಲಿನಂತೆಯೇ ಚಪ್ಪಟೆ ಮೂಗು ಅವರದಾಯಿತು.

ನೀತಿ :– ದೇವರು ಮೆಚ್ಚುವಂತೆ ಯುಕ್ತಿ ಬೆಳೆಸಿಕೊಳ್ಳಬೇಕು. ಕೊಟ್ಟಿರುವ ಆಯಸ್ಸು ಅತಿ ಆಸೆಯಿಂದ ಎಂಬ ವ್ಯರ್ಥವಾಗಿ ಕಳೆದುಕೊಳ್ಳಬೇಡಿ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button