ದಾರ್ರಿದ್ರ್ಯನ ದೇಹಕ್ಕೆ ಕೋಟಿ ರೂ. ಸೋಮಾರಿ ಯುವಕನ ಎಚ್ಚರಿಸಿದ ವ್ಯಾಪಾರಿ

ಅತ್ಯಮೂಲ್ಯ ದೇಹ
ಗುಣಪಾಲ ಎಂಬ ತೀರಾ ದರಿದ್ರ ಯುವಕ. ನಿರುದ್ಯೋಗಿಯಾಗಿ ಜೀವನವೆಲ್ಲ ಕತ್ತಲೆ ಎಂದೇ ತಿಳಿದು ನದಿಗೆ ಹಾರಿ ಸಾಯಬೇಕೆಂದೇ ಒಂದು ದಿನ ನದಿ ತೀರದಲ್ಲಿದ್ದ. ಆಗ ಒಂಟೆಗಳ ಮೇಲೆ ಕುಳಿತ ಒಬ್ಬ ವ್ಯಾಪಾರಿ ಬಂದ.
ಇವನನ್ನು ಮಾತನಾಡಿಸಿ ಸಾಯಬಾರದೆಂದು ಒತ್ತಾಯಿಸಿ ಅವನಲ್ಲೇ ಅತ್ಯಮೂಲ್ಯ ದೇಹವಿದೆ ಎಂದು ನೆನಪಿಸುತ್ತಾನೆ. ನಿನ್ನ ಒಂದು ಕಣ್ಣಿಗೆ ಒಂದು ಲಕ್ಷ ರೂ. ಕೊಡುವೆ. ಎಂದಾಗಲೇ ಗುಣಪಾಲ ಹೇಳಿದ ‘ನೀನು ಎಷ್ಟು ಹಣಕೊಟ್ಟರೂ ಕಣ್ಣಿಲ್ಲದ ಬಾಳ್ವೆ ಯಾತಕ್ಕೆ?’
ಒಂದು ಕೈಗೆ ರೂ.2 ಲಕ್ಷ ಎಂದಾಗ ‘ಕೈಗಳಿಲ್ಲದೆ ಬದುಕು ದುರ್ಭರ’ ಎಂದ. ಒಂದು ಕಾಲಿಗೆ 3 ಲಕ್ಷ ರೂ. ಎಂದಾಗಲೂ ‘ಅದು ಅಸಾಧ್ಯ’ ಎಂದು ಬಿಟ್ಟ.
‘ಇಡೀ ಶರೀರವನ್ನೇ ಕೊಡು, ಒಂದು ಕೋಟಿ ರೂ. ಕೊಡುವೆ’ ಎಂದಾಗ ಗುಣಪಾಲನಿಗೆ ಕೋಪ ಉಕ್ಕಿತು. ‘ನೀನೊಬ್ಬ ಪಿಶಾಚಿ, ನನ್ನೀ ದೇಹ ಅತ್ಯಮೂಲ್ಯವಾಗಿದೆ. ಯಾವ ಅಂಗವನ್ನೂ ನಿನಗೆ ಕೊಡಲಾರೆ. ತೊಲಗಾಚೆ’ ಎಂದು ಬಿಟ್ಟು.
ವ್ಯಾಪಾರಿ ಮುಗುಳಕ್ಕ. “ಅಯ್ಯಾ, ನಿನ್ನಲ್ಲಿ ಹಣವಿಲ್ಲವೆಂದೇ ಆತ್ಮಹತ್ಯೆಗೆ ಸಿದ್ಧವಾಗಿದ್ದೆಯಲ್ಲ, ಎಂಥ ಅತ್ಯಮೂಲ್ಯ ದೇಹ ನಿನ್ನ ಬಳಿ ಇದೆ. ಅಲ್ಲವೇ? ಇನ್ನಾದರೂ ಚುರುಕಾಗು, ಬೇಗ ವಿವೇಕದಿಂದ ದುಡಿದು ಬದುಕು ನೆಮ್ಮದಿಯಿಂದ” ಎಂದು ಗದರಿಸಿ ಬಡಿದೆಬ್ಬಿಸಿದ.
ನೀತಿ :– ಮಾನವ ಜನ್ಮ ದೊಡ್ಡದು ಇದು ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.