
ತಾಯಿ ಕರಳು
ಒಂದು ಸಾರಿ ರಾಮಯ್ಯ ಎಂಬುವನು ಬೆಳಿಗ್ಗೆ ಸೌದೆ ಕಡೆಯಲು ಪ್ರಾರಂಭಿಸುತ್ತಾನೆ. ಮಧ್ಯಾಹ್ನವಾದರೂ ಮುಗಿಯುವುದಿಲ್ಲ. ಅವನ ತಾಯಿ ಬಂದು ನಾಲ್ಕು ಐದು ಸಲ ಕರೆಯುತ್ತಾಳೆ. ಮಗ ಬಿಸಿಲು ಜಾಸ್ತಿ ಉಳಿದದ್ದು ನಾಳೆ ಕಡೆದರಾಯಿತು ಎಂದು ಹೇಳುತ್ತಾಳೆ. ಅವನು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ಸೌದೆಯನ್ನು ಕಡೆಯುತ್ತಲೇ ಇರುತ್ತಾನೆ.
ಆಗ ಅವನ ತಾಯಿಯು ತನ್ನ ಮಗನ ಮಗುವನ್ನು ಕರೆದುಕೊಂಡು ಬಂದು ತನ್ನ ಮಗ ಸೌದೆ ಹೊಡೆಯುತ್ತಿರುವ ಜಾಗದಲ್ಲಿ ಕಲ್ಲಿನ ಮೇಲೆ ಕೂರಿಸುತ್ತಾಳೆ.
ಆಗ ಮಗು ಕಿಟಾರನೆ ಕಿರಿಚುಕೊಳ್ಳುತ್ತೆ. ತಕ್ಷಣ ಮಗ ಓಡಿಬಂದು ಮಗುವನ್ನು ಕೈಗೆ ಎತ್ತಿಕೊಂಡು ಏನಮ್ಮಾ ನಿನಗೆ ಬುದ್ಧಿ ಇದೆಯಾ, ಮಗುವನ್ನು ಉರಿಯುವ ಬಿಸಿಲಿನಲ್ಲಿ ಕೂರಿಸಿದೆಯಲ್ಲಾ ಎನ್ನುತ್ತಾನೆ.
ಹೌದಪ್ಪ ನನಗೆ ಬುದ್ಧಿಯಿಲ್ಲ ನಾನು ಎಷ್ಟು ಸಾರಿ ಕೂಗಿದರು ನೀನು ಬಿಸಿಲಿನಲ್ಲಿ ಸೌದೆ ಕಡೆಯುತ್ತಲೇ ಇದ್ದೆ. ಈಗ ನಿನ್ನ ಮಗು ಬಿಸಿಲಿನಲ್ಲಿ ಕುಳಿತಿದ್ದಕ್ಕೆ ನಿನ್ನ ಕರಳು ಚುರುಕ್ ಎಂದಿತು. ನನ್ನ ಮಗ ಉರಿಯುವ ಬಿಸಿಲಿನಲ್ಲಿ ಸೌದೆ ಕಡೆಯುತ್ತಿದ್ದರೆ ನನ್ನ ಕರಳು ಚುರುಕ್ ಎನ್ನುವುದಿಲ್ಲವೇ ಎನ್ನುತ್ತಾಳೆ ತಾಯಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.