ಕನ್ನಡಿ
ಬ್ರಹ್ಮಗಿರಿಯೆಂಬ ಬಾಲಾಜಿಯ ದೊಡ್ಡ ಭಕ್ತನಿದ್ದನು. ಒಬ್ಬ ದೊಡ್ಡ ಶ್ರೀಮಂತ ಆದರೆ ಅಷ್ಟೇ ಜಿಪುಣಿ ವ್ಯಾಪಾರಿ ಮೇಲಿಂದ ಮೇಲೆ ಅವನ ಕಡೆಗೆ ಹೋಗುತ್ತಿದ್ದನು.
ಬ್ರಹ್ಮಗಿರಿಯು ಒಮ್ಮೆ ಆ ವ್ಯಾಪಾರಿಗೆ ನೀನು ದುಡ್ಡಿನ ಮೂಲಕ ಜಗತ್ತಿನ ಕಡೆಗೆ ನೋಡುತ್ತಿ ಅದನ್ನು ಬಿಟ್ಟು ನಿನ್ನ ಸ್ವಂತದ ಕಡೆಗೆ ನೋಡು ಎಂದನು. ಅದಕ್ಕೆ ಆ ವ್ಯಾಪಾರಿಯು ನನಗೆ ದುಡ್ಡಿನ ದೃಷ್ಠಿಯಿಂದಲೇ ಎಲ್ಲವೂ ಕಾಣಿಸುತ್ತದೆ. ಅದಕ್ಕೇನು ಮಾಡಬೇಕು ? ಎಂದು ಕೇಳಿದ, ಆಗ ಆ ಸಾಧು ಒಂದು ಗಾಜನ್ನು ಅವನ ಮುಂದೆ ಹಿಡಿದು ಅದರೊಳಗಿನಿಂದ ನೋಡಲು ಹೇಳಿದನು. ಹಾಗೂ ಏನು ಕಾಣಿಸುತ್ತಿದೆ ಎಂದು ಕೇಳಿದನು.
ಅದಕ್ಕೆ ಅವನು ನನಗೆ ಹೊರಗಿನ ಜಗತ್ತು ಕಾಣಿಸುತ್ತಿದೆ ಎಂದ. ಆನಂತರ ಆ ಕಾಜಿನಷ್ಟೇ ದೊಡ್ಡ ಕನ್ನಡಿ ಹಿಡಿದು ಅದರಲ್ಲಿ ನೋಡಲು ಹೇಳಿದನು. ಆಗ ಅವನು ಇದರಲ್ಲಿ ನಾನೇ ಕಾಣಿಸುತ್ತೇನೆ ಎಂದ.
ಅದಕ್ಕೆ ಆ ಭಕ್ತನು ಕಾಜಿಗೆ ಹಿಂದೆ ಆವರಣ ಹಚ್ಚಿದರೆ ನಾವು ಯಾರು ಎಂಬುದು ಕಾಣುತ್ತದೆ. ಅದರಂತೆ ಕೇವಲ ದುಡ್ಡು ಹಾಗೂ ಪ್ರಪಂಚ ಕಾಜಿನಂತೆ ಇರುತ್ತವೆ. ದುಡ್ಡು ಪ್ರಾಪ್ತವಾಗುವುದರ ಹಿಂದೆ ಹಾಗೂ ಪ್ರಪಂಚ ನಡೆಯುವುದರ ಹಿಂದೆ ಭಗವಂತನ ಸತ್ಯ ಇರುತ್ತದೆಂಬ ಅರಿವನ್ನು ಇಟ್ಟುಕೊಂಡರೆ ನಮಗೆ ನಮ್ಮ ಸ್ವರೂಪ ತಿಳಿಯುತ್ತದೆ ಎಂದನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.