ದೇವರ ಅನುಗ್ರಹ ಅಂದ್ರೆ ಇದು..
ದೇವರ ಕಟಾಕ್ಷ
ಸಮುದ್ರಯಾನ ಮಾಡವಾಗ ಹಡಗು ಮಗುಚಿ ಒಬ್ಬನೇ ಒಬ್ಬ ತನಗೆ ತಿಳಿಯದೆ, ಮನುಷ್ಯರಿಲ್ಲದ ಐಲ್ಯಾಂಡ್ ಒಂದನ್ನು ತಲುಪುವಲ್ಲಿ ಯಶಸ್ವಿಯಾದ. ಎಲ್ಲ ವಿಧದಲ್ಲೂ ಸಹಾಯಕ್ಕಾಗಿ ನೋಡಿ, ಕಡೆಗೆ ಬೇಸತ್ತು ತನ್ನನ್ನು ತಾನು ಗಾಳಿ, ಚಳಿಯಿಂದ ರಕ್ಷಿಸಿಕೊಳ್ಳಲು ಹಾಗೂ ತನ್ನಲ್ಲಿದ್ದ ಕೆಲವೇ ಕೆಲವು ಬೆಲೆ ಬಾಳುವ ವಸ್ತುಗಳನ್ನು ಇಡಲು ಅಲ್ಲೇ ಬಿದ್ದಿದ್ದ ಸೋಗೆಗಳನ್ನು ಒಟ್ಟುಗೂಡಿಸಿ ಒಂದು ಗುಡಿಸಲು ನಿರ್ಮಿಸಿಕೊಂಡ.
ಗೆಡ್ಡೆಗೆಣಸಿಗಾಗಿ ನೆಲ ಅಗೆಯಲು ಹೋದವ ಬರುವಾಗ ನೋಡಿದರೆ ಗುಡಿಸಲಿಗೆ ಬೆಂಕಿ ಹತ್ತಿತ್ತು! ಆತ ದೇವರಿಗೆ ಬೈಯ್ಯ ತೊಡಗಿದ. ಮರುದಿನ ಬೆಳಿಗ್ಗೆ ಏಳುವಾಗ ಅವನನ್ನು ಹೊತ್ತೊಯ್ಯಲು ಹೆಲಿಕಾಪ್ಟರ್ ಬಂದಿತ್ತು.
ಆನಂದಾಶ್ಚರ್ಯದಿಂದ ನಿಮಗೆ ಹೇಗೆ ತಿಳಿಯಿತು. ನಾನಿಲ್ಲಿದ್ದೀನೆಂದು ? ಎಂದು ಕೇಳಿದ. ಅದಕ್ಕವರು, ಬೆಂಕಿ ಹಾಕಿದ್ದಿರಲ್ಲ, ಹೊಗೆಯನ್ನು ನೋಡಿ ರಕ್ಷಣೆ, ಕೇಳುತ್ತಿದ್ದೀರೆಂದು ತಿಳಿಯಿತು ಎಂದರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.