ಸಾಮಾಜಿಕ ಜವಾಬ್ದಾರಿ
ಒಮ್ಮೆ ರಾಜನೊಬ್ಬ ರಸ್ತೆಯ ಮಧ್ಯದಲ್ಲಿ ದೊಡ್ಡ ಕಲ್ಲೊಂದನ್ನು ಇಟ್ಟು ಜನರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡಬಯಸಿದ. ಹಾದಿಯಲ್ಲಿ ಹೋಗುವವರೆಲ್ಲ ರಾಜನಿಗೆ ರಸ್ತೆ ಸುಗಮವಾಗದಿದ್ದಕ್ಕೆ ಬೈದರೇ ವಿನಾ ಒಬ್ಬರೇ ಒಬ್ಬರೂ ಕಲ್ಲನ್ನೆತ್ತಿ ಬದಿಗೆ ಹಾಕುವ ಬಗ್ಗೆ ಯೋಚಿಸಲಿಲ್ಲ.
ಅಷ್ಟರಲ್ಲಿ ತರಕಾರಿ ಮಾರುವವನೊಬ್ಬ ತಳ್ಳುಗಾಡಿಯೊಂದಿಗೆ ಬಂದ. ಕಲ್ಲನ್ನು ಸರಿಸಲು ಭಗೀರತ ಯತ್ನ ಮಾಡಿದ ನಂತರ ಆತ ಸಫಲನಾದ. ಕಲ್ಲಿಟ್ಟ ಜಾಗದ ಕೆಳಗೊಂದು ಗಂಟು ಹಾಗೂ ಪತ್ರ ಇತ್ತು. ಗಂಟಿನ ತುಂಬಾ ಚಿನ್ನದ ನಾಣ್ಯಗಳಿದ್ದು, ಪತ್ರದಲ್ಲಿ ಕಲ್ಲನ್ನೆತ್ತಿ ಬದಿಗೆ ಹಾಕಿದವನಿಗೆ ಈ ನಾಣ್ಯಗಳು ನನ್ನ ಉಡುಗೊರೆ ಎಂದು ರಾಜನ ಸಹಿಯಿತ್ತು.
ನೀತಿ :– ಸಾಮಾಜಿಕವಾಗಿ ಮಾಡುವ ಒಳ್ಳೆಯ ಕಾರ್ಯಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುವುದು. ಅದು ನಿಧಾನವಾದರೂ ಶಾಶ್ವತವಾಗಿರುತ್ತದೆ. ಈ ನಂಬಿಕೆ ಸರೋವರದಲ್ಲಿ ಇದ್ದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ ಇದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.