
ದಿನಕ್ಕೊಂದು ಕಥೆ
ಅರಿವಿನ ಕಣ್ಣು ತೆರೆದಿರಲಿ..!
ಸ್ವಾತಂತ್ರ್ಯ ಕಾಲದಲ್ಲಿ ಗಾಮಾ ಎಂಬ ಹೆಸರಿನವನು ಈ ದೇಶದ ಪ್ರಸಿದ್ಧ ಕುಸ್ತಿಪಟು ಆಗಿದ್ದ. ಆತನನ್ನು ಎದುರಿಸುವ ಸಾಮರ್ಥ್ಯ ದೇಶದಲ್ಲಿಯೇ ಬಹುತರ ಯಾರಿಗೂ ಇರಲಿಲ್ಲ. ಇಡೀ ದೇಶವೇ ಅವನ ಶಕ್ತಿ ಸಾಮರ್ಥ್ಯದ ಕುರಿತು ಹೆಮ್ಮೆ ಪಡುತ್ತಿತ್ತು. ಅದು ಗಾಮಾನಲ್ಲಿ ಅಹಂಕಾರ ಉಂಟು ಮಾಡಿತ್ತು.
ಒಮ್ಮೆ ಅವನು ತನ್ನ ಮಿತ್ರರಿಗೆ ಹೇಳಿದ “ಆ ದುರ್ಬಲ ದೇಹದ ಗಾಂಧಿಯಲ್ಲಿ ಏನಿದೆ?” ಮುಂದೆ ಕೆಲವು ದಿನಗಳಲ್ಲಿ ದುರ್ದೈವವಶಾತ್ ಗಾಮಾನಿಗೆ ಅರ್ಧಾಂಗವಾಯು ಕಾಯಿಲೆ ಆಯಿತು. ಕೈ ಕಾಲುಗಳು ಎತ್ತಲೂ ಆಗದಂಥ ಅಸಹನೀಯ ಪರಿಸ್ಥಿತಿಯುಂಟಾಯಿತು. ಗಾಮಾನಿಗೆ ಕಣ್ಣೀರು ಬಿಟ್ಟು ಬೇರೆ ಗತಿಯಿಲ್ಲದಂತಾಯಿತು.
ಆಗ ಅದೇ ಮಿತ್ರನು ಬಂದು ಈಗ ಹೇಗಿದೆ ? ಎಂದು ಕೇಳಿದ. ಗಾಮಾ ಹೇಳಿದ “ಈಗ ನನಗೆ ತಿಳಿಯಿತು. ನನ್ನ ದೇಹಶಕ್ತಿ ನಶ್ವರ, ಗಾಂಧೀಜಿಯ ಆತ್ಮಶಕ್ತಿ ಅಮರ ! ಇದೇ ತಿಳುವಳಿಕೆ, ಜ್ಞಾನ ನನಗೆ ಮೊದಲೇ ಇದ್ದಿದ್ದರೆ ನಾನು ಅಹಂಕರಿಸುತ್ತಿರಲಿಲ್ಲ” ಈಗ ಗಾಮಾನಲ್ಲಿ ಅರಿವಿನ ಕಣ್ಣು ತೆರೆದಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.