ಚಿನ್ನ ಪಡೆದವ ಇಲ್ಲವೆಂದು ಸುಳ್ಳು ಹೇಳಿದ ಸತ್ಯ ಬಯಲಾದದ್ದೇಗೆ.? ಓದಿ
ದಿನಕ್ಕೊಂದು ಕಥೆ
ಚಿನ್ನದ ಉಂಗುರ
ರಹೀಮನೆಂಬವನು ತನ್ನ ಮಿತ್ರನಾದ ಭೀಮನಿಂದ ಮದುವೆಗೋಸ್ಕರ ಬಂಗಾರದ ಉಂಗುರವನ್ನು ಕಡ ತೆಗೆದುಕೊಂಡು, ಮದುವೆಯಿಂದ ಬಂದ ತಕ್ಷಣವೇ ಹಿಂದಿರುಗಿಸುವುದಾಗಿ ಹೇಳಿ ಪಡೆದಿದ್ದ.
ಆದರೆ ದುರಾಸೆಯಿಂದಾಗಿ ರಹೀಮನು ಅದನ್ನು ಹಿಂದಿರುಗಿಸಲೇ ಇಲ್ಲ. ಒಂದು ತಿಂಗಳ ನಂತರ ಭೀಮನು ಕೇಳಿದಾಗ ‘ಏನು ? ಯಾವ ಉಂಗುರ ? ನಿನ್ನ ಬಳಿಯಿಂದ ನಾನಂತೂ ಉಂಗುರ ಪಡೆದೇ ಇಲ್ಲ’ ಎಂದೇ ಬಿಟ್ಟ.
ವಿಧಿಯಿಲ್ಲದೆ ಪೋಲಿಸರ ಬಳಿ ಹೋಗಿ ಹೇಳಿದ ಭೀಮ. ಆಗ ಪೋಲಿಸರು ‘ಇಬ್ಬರ ಬಳಿಯೂ ಸಾಕ್ಷಿಗಳಿಲ್ಲ. ನಾನು ಯೋಗ್ಯ ಅಕ್ಕಸಾಲಿಗನಿಂದಲೇ ಉಂಗುರದಲ್ಲಿರುವ ಬಂಗಾರದ ಪರೀಕ್ಷೆ ಮಾಡಿಸುವೆ. ಇದನ್ನು ತೂಗಿಸಿ ಇದರ ತೂಕ ನೋಡಿ ಆನಂತರ ಸಮನಾಗಿ ಇತರ ಬೆಲೆಯನ್ನು ಹಂಚುವೆ ‘ ಎಂದರು.
ಅಕ್ಕಸಾಲಿಗ ತುಂಬಿದ ಸಭೆಯಲ್ಲಿ ಉಂಗುರದ ಬಂಗಾರವನ್ನು ಪರೀಕ್ಷಿಸಲು ಸಾಣೆಕಲ್ಲಿಗೆ ಹಾಕಿ ಚೆನ್ನಾಗಿ ತಿಕ್ಕಲಾರಂಭಿಸಿದ. ಇದನ್ನು ಕಂಡು ಉಂಗುರದ ನಿಜವಾದ ಮಾಲೀಕನಿಗೆ ಸಹಿಸಲಾಗಲಿಲ್ಲ . ಅವನು ಕಿರುಚಿ ‘ಹೀಗ್ಯಾಕೆ ತಿದ್ದಿಯಾ? ಬಂಗಾರವೆಲ್ಲ ಹಾಳಾಗಲ್ವಾ? ‘ಎಂದು ಸಿಟ್ಟಿನಿಂದ ಕೂಗಿದ, ಆದರೆ ಭೀಮನಂತೆ ರಹೀಮನು ರೇಗಾಡದೆ ತಣ್ಣಗಿದ್ದ.
ಕಡೆಗೆ ಅಕ್ಕಸಾಲಿಗೆ ಒಂದು ಸಣ್ಣ ತಕ್ಕಡಿಯಲ್ಲಿ ಬಂಗಾರವನ್ನು ಅಳೆಯಲಾರಂಭಿಸಿದ. ಆಗಲೂ ಭೀಮನು ‘ತಕ್ಕಡಿಯ ತಟ್ಟೆಗಳು ಸರಿಯಿಲ್ಲ. ನೀನು ಅಳೆಯುವ ಕ್ರಮವೇ ಸರಿಯಿಲ್ಲ’ ಎಂದು ಬೊಬ್ಬೆ ಹಾಕಿದ.
ಉಂಗುರದ ಮಾಲೀಕ ಭೀಮನೇ ಎಂಬುದು ಪೋಲಿಸರಿಗೆ ಸ್ಪಷ್ಟವಾಯಿತು. ತಕ್ಷಣ ಹಾಗೆಂದೇ ಹೇಳಿಯೂ ಬಿಟ್ಟರು. ಆಗಲೇ ರಹೀಮನು ತನ್ನ ತಪ್ಪೊಪ್ಪಿಕೊಂಡು ಕ್ಷಮೆಯನ್ನೂ ಕೇಳಿದ.
ನೀತಿ :– ನಮ್ರತೆ, ಧೈರ್ಯ ಇದ್ದರೆ ಲಾಭವಾಗುವುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.