ಬಂಗಾರದ ಹೂಜಿ ಮೂಲಕ ಮಣ್ಣಿನ ಗುಣ ಮಹತ್ವ ತಿಳಿಸಿದ ಕವಿ
ದಿನಕ್ಕೊಂದು ಕಥೆ
ಸೌಂದರ್ಯ ಪ್ರೇಮಿ ರಾಜನಿಗೆ ಪಾಠ ಕಲಿಸಿದ ಕವಿ
ಬಂಗಾರ ಮತ್ತು ಮಣ್ಣು
ಕಡು ಬೇಸಿಗೆಯ ದಿನದಲ್ಲಿ ರಾಜ ವಿಕ್ರಮಾದಿತ್ಯನ ಬೆವರಿನಿಂದ ಒದ್ದೆಯಾಗಿದ್ದ. ಕಾಳಿದಾಸನು ತುಂಬಾ ಬೇವತಿದ್ದ. ಸೇವಕರು ಇಬ್ಬರಿಗೂ ಗಾಳಿ ಬೀಸುತ್ತಿದ್ದರು.
ತಾನು ಸುಂದರ ಎಂದು ಬೀಗಿದ್ದ ರಾಜನು ಕಾಳಿದಾಸನತ್ತ ನೋಡುತ್ತಾ “ಮಹಾಕವಿಗಳೇ, ನೀವು ದೊಡ್ಡ ವಿದ್ವಾಂಸರೂ, ಗುಣವಂತರೂ, ಚತುರರೂ ನಿಜವೆ. ಆದರೆ ದೇವರು ನಿಮಗೆ ಒಂದಿಷ್ಟು ಸೌಂದರ್ಯವನ್ನು ಕೊಟ್ಟಿದ್ದಾರೆ ಚೆನ್ನಾಗಿರುತ್ತಿತ್ತು ಅಲ್ಲವೇ ಎಂದ.
ಮಹಾರಾಜರೇ, ಇದಕ್ಕೆ ನಾನು ನಾಳೆ ಉತ್ತರಿಸುವೆ ಎಂದು ಕಾಳಿದಾಸ ಹೊರಟು ಹೋದ.
ಅಂದೇ ರಾತ್ರಿ ಅಕ್ಕಸಾಲಿಗನ ಬಳಿ ಹೋಗಿ ಬಂಗಾರದ ಫಳಫಳನೆ ಹೊಳೆಯುವ ಹೂಜಿಯನ್ನು ಮಾಡಿಸಿದ. ಮಾರನೇ ದಿನ ದರ್ಬಾರು ಪ್ರಾರಂಭವಾಗುವ ಮೊದಲೇ ರಾಜನ ಮಣ್ಣಿನ ಹೂಜಿಯ ಜಾಗದಲ್ಲಿ ಆ ಬಂಗಾರದ ಹೂಜಿಯನಿಟ್ಟು ನೀರು ತುಂಬಿಸಿದ.
ದರ್ಬಾರು ಪ್ರಾರಂಭವಾಯಿತು. ಅಂದು ಬಿಸಿಲಿನ ದಗೆ ಬಹಳಷ್ಟಿತ್ತು. ರಾಜನು ಎಂದಿನಂತೆ ಹೂಜಿಯತ್ತ ಕೈಚಾಚಿದ. ಆದರೆ ನೀರು ತಣ್ಣಗಿರಲಿಲ್ಲ ಪುನಃ ಕಣ್ಣೆತ್ತಿ ನೋಡಿದ. ರಾಜನು ಸಿಟ್ಟಿನಿಂದ “ಬಂಗಾರದಲ್ಲಿ ಹೂಜಿಯಲ್ಲಿ ನೀರು ಎಲ್ಲಾದರೂ ತಣ್ಣಗಿರುವುದೇನು?” ಮಣ್ಣಿನ ಹೂಜಿ ಎಲ್ಲಿಗೆ ಹೋಗಿತ್ತು? ಯಾವ ಮೂರ್ಖ ಈ ಹೂಜಿ ಬದಲಾವಣೆ ಮಾಡಿದ್ದು? ಎಂದೇ ಗುಡುಗಿದ.
ತಕ್ಷಣ ಕಾಳಿದಾಸನು ಎದ್ದು ನಿಂತು “ಆ ಮೂರ್ಖ ನಾನೇ. ನೀವು ಎಷ್ಟಾದರೂ ಸೌಂದರ್ಯ ಪ್ರೇಮಿಗಳಲ್ಲವೇ? ಮಣ್ಣಿನ ಕುರೂಪ ಪೂಜೆ ನಿನಗೆ ಅಸಹ್ಯವಾಗಿ ಕಂಡು ಬಂದಿತೆಂದೇ ನನಗನಿಸಿತು.
ನೀರು ತಣ್ಣಗೆ ಮಾಡುವ ಮಹಾಗುಣ ಮಣ್ಣಿನ ಹೂಜಿಗಿದ್ದರೂ ನೀವು ಗುಣಕ್ಕಿಂತ ಸೌಂದರ್ಯಕ್ಕೇನೇ ಹೆಚ್ಚು ಮಹತ್ವ ಕೊಡವಿರಲ್ಲವೇ?” ಕಾಳಿದಾಸನ ವ್ಯಂಗ್ಯದಿಂದ ರಾಜ ನಾಚಿಕೊಂಡನು. ಕವಿಯಲ್ಲಿ ತಕ್ಷಣ ಕ್ಷಮೆ ಕೇಳಿಕೊಂಡ.
ನೀತಿ :– ಸೌಂದರ್ಯ ಹೊರಗಿಲ್ಲ ಅಂತರಂಗದಲ್ಲಿದೆ. ಬಂಗಾರ ಹೊರ ಸೌಂದರ್ಯವಾದರೆ ಮಣ್ಣು ಆಂತರಿಕ ಸೌಂದರ್ಯ ಹೊಂದಿದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.