ಪ್ರಮುಖ ಸುದ್ದಿ
ಪತ್ನಿ ಪ್ರೇಮದಲಿ ಹೆತ್ತವರನ್ನ ಮರಿಬೇಡ ದಾಟಿಯಲಿ ಸಿಟಿ ರವಿಗೆ ಕುಟುಕಿದ ಶಹಾಪುರದ ಯುವ ಉದ್ಯಮಿ
ಕನ್ನಡದ ಪರ ಧ್ವನಿ ಎತ್ತಿದ ಯುವ ಉದ್ಯಮಿ
ಸಿಟಿ ರವಿ ನಿಲುವು ಪ್ರಶ್ನೆ ಮಾಡಿದ ಯುವ ಉದ್ಯಮಿ
ಹೆಂಡತಿಯ ಪ್ರೇಮದಲಿ ಹೆತ್ತವರನ್ನ ಮರಿಬೇಡ ದಾಟಿಯಲಿ ಸಿಟಿ ರವಿಗೆ ಕುಟುಕಿದ ಶಹಾಪುರದ ಯುವ ನಾಯಕ, ಉದ್ಯುಮಿ ರಾಜೂ ಆನೇಗುಂದಿ
ಯಾದಗಿರಿಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮೇಕೆದಾಟು ವಿಚಾರದಲ್ಲಿ ದೇಶದ ಪರ ನಿಲುವು ತಮ್ಮದು ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿರುವದನ್ನು ಗಮನಿಸಿದ ಇಲ್ಲಿನ ಶಹಾಪುರದ ಯುವ ಉದ್ಯಮಿ ರಾಜೂ ಆನೇಗುಂದಿ, ಸಿಟಿ ರವಿ ಅವರಿಗೆ, “ಹೆಂಡತಿ ಪ್ರೇಮದಲಿ ಹೆತ್ತವರ ಮರಿಬೇಡ” “ದೇಶ ಪ್ರೇಮದಲಿ ಕನ್ನಡ ಮರಿಬೇಡ” “ನಮ್ಮ ನಿಮ್ಮ ಪ್ರೇಮದಲ್ಲಿ ಉದ್ರಿ ಕೇಳಬೇಡ” ಎಂಬ ತಮ್ಮ ವ್ಯಾಪಾರ ಭಾವದ ಒಂದು ಉಲ್ಲೇಖವನ್ನು ಹೋಲಿಸಿ ಕುಟುಕಿದ್ದಾರೆ.
ಆನೇಗುಂದಿಯವರ ಉದ್ದೇಶವಿಷ್ಟೆ ಕನ್ನಡಿಗರಾದ ತಾವೂ ಮೇಕೆದಾಟು ವಿಷಯದಲ್ಲಿ ಹಾರಿಕೆ ಉತ್ತರ ಕೊಡಬೇಡಿ. ದೇಶದ ಪರ ಎಂಬ ನಿಲುವಿನ ಹಿಂದೆ ಹೆತ್ತವರನ್ನ, ಮಾತೃ ಭಾಷೆಯನ್ನ ಕಡೆಗಣಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.