ಕೈ, ಕಾಲು ಉರಿಯೇ.? ರಕ್ತ ಹೀನತೆಯೇ.? ಈ ಬಳ್ಳಿಯ ಎಲೆಯಲ್ಲಿದೆ ರೋಗ ನಿರೋಧಕ ಶಕ್ತಿ ಯಾವುದಾ ಬಳ್ಳಿ..?
ಉತ್ತಮ ಆರೋಗ್ಯಕ್ಕೆ ಈ ಬಳ್ಳಿ ಬಳಸಿ ಬೆಳೆಸಿ
ಕೈ, ಕಾಲು ಉರಿಯೇ.? ರಕ್ತ ಹೀನತೆಯೇ.? ಈ ಬಳ್ಳಿಯ ಎಲೆಯಲ್ಲಿದೆ ರೋಗ ನಿರೋಧಕ ಶಕ್ತಿ ಯಾವುದಾ ಬಳ್ಳಿ..?
ವಿವಿ ಡೆಸ್ಕ್ಃ ಸದಾ ಕೈ ಕಾಲು ಉರಿ ಅಥವಾ ರಕ್ತ ಹೀನತೆಯಿಂದ ಬಳಲುವವರು ಹಲವಾರು ವೈದ್ಯರನ್ನು ಸಂಪರ್ಕಿಸಿಯೂ ವಾಸಿಯಾಗದೆ ರೋಸಿ ಹೋಗಿದ್ದೀರಾ.?
ಹಾಗಿದ್ದರೆ ಈ ಸಿಂಪಲ್ ಆಯುರ್ವೇದ ಔಷಧಿ ಬಳಸಿ ನೀವೆ ಮನೆಯಲ್ಲಿ ತಯಾರಿಸಿಕೊಳ್ಳಬಹುದು ದುಡ್ಡು ಖರ್ಚಿಲ್ಲ. ನಿಯಮಿತವಾಗಿ ಈ ಔಷಧಿ ಬಳಸಿ ವಾಸಿ ಮಾಡಿಕೊಳ್ಳಬಹುದು ಆದರೆ ಒಂದಿಷ್ಟು ತಾಳ್ಮೆ ಇರಲಿ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
ಬನ್ನಿ ಹಾಗಾದರೆ ಯಾವುದದು ಬಳ್ಳಿ ಹೇಗೆ ಚಿಕಿತ್ಸೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬಹುದು ನೋಡೋಣ.
ಅಮೃತ ಬಳ್ಳಿಯೇ ಹಲವು ರೋಗಗಳಿಗೆ ರಾಮಬಾಣ
ಕೈ ಕಾಲು ಉರಿಯಿದ್ದವರು ಅಮೃತ ಬಳ್ಳಿಯ ಎಲೆಗಳನ್ನು ಒಣಗಿಸಿ ನಂತರ ಅವುಗಳನ್ನು ಪುಡಿ ಪುಡಿ ಮಾಡಿಟ್ಟುಕೊಂಡು ಆ ಪುಡಿಯನ್ನು ಬೆಳಗ್ಗೆ ಮತ್ತು ಸಂಜೆ ಅದಕ್ಕೆ ಹಚ್ಚುತ್ತಾ ಬನ್ನಿ ಕ್ರಮೇಣ ಕೈ ಕಾಲು ಉರಿ ಕಡಿಮೆಯಾಗಲಿದೆ.
ಅದೇ ರೀತಿ ಮಲಬದ್ಧತೆ, ಗ್ಯಾಸ್ ಸಮಸ್ಯೆ ಇದ್ದವರು, ಜ್ವರದಿಂದ ಬಳಲುತ್ತಿದ್ದರೇ, ಈ ಬಳ್ಳಿಯ ಕಷಾಯ ಮಾಡಿ ಕುಡಿದರೆ ದೇಹದ ಉಷ್ಣತೆ ಕಡಿಮೆಯಾಗಿ ಸಮಸ್ಯೆ ನಿವಾರಣೆಯಾಗಲಿದೆ. ಈ ಬಳ್ಳಿ ನಿತ್ಯ ನಾಲ್ಕು ಎಲೆ ಖಾಲಿ ಹೊಟ್ಟೆಯಲಿ ತಿನ್ನೋದರಿಂದಲು ರೋಗ ನಿರೋಧ ಶಕ್ತಿ ಹೆಚ್ಚಾಗಲಿದೆ. ಅಲ್ಲದೆ ರಕ್ತಹೀನತೆಯಿಂದ ಬಳಲುವವರು ಈ ಎಲೆಯ ಚಿಟಿಕೆ ಪುಡಿಯನ್ನು ಜೇನು ತುಪ್ಪದೊಂದಿಗೆ ತಿನ್ನುವದರಿಂದ ರಕ್ತ ಹೀನತೆ ಸಮಸ್ಯೆಯಿಂದ ಹೊರ ಬರಬಹುದು. ಎಲೆಯನ್ನು ನೀರಲ್ಲಿ ಕುದಿಸಿ ಸಹ ಶೋಧಿಸಿ ಕುಡಿಯಬಹುದು.