ದೋರನಹಳ್ಳಿ ದುರಂತಃ ಸಾವಿನ ಸಂಖ್ಯೆ 12 ಕ್ಕೆ ಏರಿಕೆ
ಸಿಲಿಂಡರ್ ಸ್ಪೋಟಃ ಇಂದು 12 ನೇ ಸಾವು
Yadgiri, ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಫೆ.25 ರಂದು ಸೀಮಂತ ಕಾರ್ಯಕ್ರಮವೊಂದರಲ್ಲಿ ನಡೆದ ಸಿಲಿಂಡರ್ ಸ್ಪೋಟ ದುರಂತದಲ್ಲಿ 24-25 ಜನ ಗಾಯಗೊಂಡಿದ್ದರು, ಅದರಲ್ಲಿ ಶುಕ್ರವಾರ ಮತ್ತೊಂದು ಸಾವು ಸಂಭವಿಸುವ ಮೂಲಕ ಸಾವಿನ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.
ಸುಮಂಗಲಾ ಚನ್ನಪ್ಪ ಹಳ್ಳದ (45) ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಸಿಲಿಂಡರ್ ಸ್ಪೋಟ ದುರಂತದಲ್ಲಿ ಮೃತರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.