Home
ದೋರನಹಳ್ಳಿ ದುರಂತಃ ಮತ್ತೊಂದು ಮಗು ಸಾವು, ಸಾವಿನ ಸಂಖ್ಯೆ 5 ಕ್ಕೆ ಏರಿಕೆ
ಸಿಲಿಂಡರ್ ಸ್ಪೋಟ ಘಟನೆಃ ಸಾವಿನ ಸಂಖ್ಯೆ ಏರಿಕೆ
ದೋರನಹಳ್ಳಿ ದುರಂತಃ ಮತ್ತೊಂದು ಮಗು ಸಾವು, ಸಾವಿನ ಸಂಖ್ಯೆ 5 ಕ್ಕೆ ಏರಿಕೆ
ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮ ಸಮೀಪದ ಕೆಬಿಜೆಎನ್ಎಲ್ ಕ್ಯಾಂಪ್ ನಲ್ಲಿ ಸೀಮಂತ ಕಾರ್ಯಕ್ರಮವೊಂದರಲ್ಲಿ ಸಿಲಿಂಡರ್ ಸ್ಪೋಟದಿಂದ ನಡೆದ ಅನಾಹುತದಲ್ಲಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮತ್ತೊಂದು 6 ವರ್ಷದ ಮಗು ಸಾವನ್ನಪ್ಪಿದೆ.
ಸಿಲಿಂಡರ್ ಸ್ಪೋಟದಿಂದ ಈ ಮಗುವಿನ ಮೈಮೇಲಿನ ಚರ್ಮ ಕಾಣದಂತಾಗಿತ್ತು. ಬೆಂಕಿಗೆ ಮೈ ಮೇಲಿನ ಚರ್ಮ ಸುಟ್ಟು ಒಳಪದರು ಕಂಡು ಗ್ರಾಮದ ಮಾತೃ ಹೃದಯಿಗಳು ಆ ದುರ್ಘಟನೆಯಿಂದ ಇನ್ನೂ ಹೊರ ಬಂದಿಲ್ಲ.
ಒಟ್ಟು 23 ಜನ ಗಾಯಗೊಂಡಿದ್ದು, ಇಂದು1 ಮಗುವಿನ ಸಾವು ಸೇರಿದಂತೆ 5 ಜನ ಮೃತಪಟ್ಟಂತಾಗಿದೆ. ಇನ್ನೂ ಮೂರು ರಿಂದ ನಾಲ್ಕು ಜನರ ಸ್ಥಿತಿ ಗಂಭೀರವಿದೆ ಎನ್ನಲಾಗಿದೆ. ಇಡಿ ಗಾಮದ ತುಂಬಾ ಸ್ಮಶಾನ ಮೌನ ಆವರಿಸಿದೆ.