Home
ದೋರನಹಳ್ಳಿ ದುರಂತಃ ಸಿಲಿಂಡರ್ ಸ್ಪೋಟ, ಸಾವಿನ ಸಂಖ್ಯೆ 15 ಕ್ಕೆ ಏರಿಕೆ
ಸಿಲಿಂಡರ್ ಸ್ಪೋಟಃ ದುಃಖದ ಮಡುವಿನಲ್ಲಿ ದೋರನಹಳ್ಳಿ
ದೋರನಹಳ್ಳಿ ದುರಂತಃ ಸಿಲಿಂಡರ್ ಸ್ಪೋಟ, ಸಾವಿನ ಸಂಖ್ಯೆ 15 ಕ್ಕೆ ಏರಿಕೆ
Yadgiri, ಶಹಾಪುರಃ ಕಳೆದ ಫೆ.25 ರಂದು ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಸೀಮಂತ ಕಾರ್ಯಕ್ರಮವೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ಅವಘಡ ಸಂಭವಿಸಿ 24-25 ಜನ ಗಾಯಗೊಂಡಿದ್ದರು,
ಈಗಾಗಲೇ 14 ಜನ ಗಾಯಾಳುಗಳು ಅಸುನೀಗಿದ್ದಾರೆ. ರವಿವಾರ ಮತ್ತೋರ್ವ ಗಾಯಾಳು ಚಂದ್ರಶೇಖರ ಕಲ್ಲಪ್ಪ ಮಲಗೊಂಡ (45) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.
ಈ ದುರ್ಘಟನೆಯಿಂದ ಇಡಿ ದೋರನಹಳ್ಳಿ ಗ್ರಾಮ ದುಖಃದ ಮಡುವಿನಿಂದ 10 ದಿನ ಕಳೆದರೂ ಹೊರ ಬರಲಾಗುತ್ತಿಲ್ಲ. ಗಾಯಾಳುಗಳಲ್ಲಿ ನಿತ್ಯ ಒಬ್ಬರು, ಇಬ್ಬರು ಅಸುನೀಗುತ್ತಿದ್ದಾರೆ.
ಅಲ್ಲದೆ ಸೀಮಂತ ಕಾರ್ಯಕ್ರಮಕ್ಕಾಗಿ ಸಮುದಾಯ ಅದೇ ಕುಟುಂಬದ ಸಂಬಂಧಿಕರೇ ಭಾಗವಹಿಸಿದ್ದು, ಒಂದೇ ಸಮುದಾಯದ ರಕ್ತ ಸಂಬಂಧಿಕರೇ ಸಾವನ್ನಪ್ಪುತ್ತಿದ್ದು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಕುಟುಂಬದ ಸ್ಥಿತಿ ದೇವರಿಗೆ ಪ್ರೀತಿ.