ದೋರನಹಳ್ಳಿ ಸಿಲಿಂಡರ್ ಸ್ಪೋಟಃ ಪರಿಹಾರಕ್ಕೆ ಡಿಸಿ ಕೋರಿಕೆ
ದೋರನಹಳ್ಳಿ ಸಿಲಿಂಡರ್ ಸ್ಪೋಟಃ ಪರಿಹಾರಕ್ಕೆ ಡಿಸಿ ಕೋರಿಕೆ
ಯಾದಗಿರಿಃ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸಿಲಿಂಡರ್ ಸ್ಪೋಟ ಘಟನೆ ನಡೆದ ಹಿನ್ನೆಲೆ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಮತ್ತು ಗಾಯಾಳುಗಳಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಗೆ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದ್ದಾರೆ.
ಶುಕ್ರವಾರ ಫೆ.25 ರಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್ ನ ಮನೆಯ ಆವರಣದಲ್ಲಿ ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 24 ಜನ ಗಾಯಗೊಂಡಿದ್ದು ಇರುತ್ತದೆ. ಇದರಲ್ಲಿ ನಿಂಗಮ್ಮ ಗಂಡ ಬಸವಂತರಾಯ ಹೆರುಂಡಿ ( 90 ವರ್ಷ), ಆಧ್ಯಾ ತಂದೆ ಬಾಬುರಾವ್ ( 04 ವರ್ಷ), ಮಹಾಂತೇಶ ತಂದೆ ಸಂಗಣ್ಣ ಲಕ್ಕಶೆಟ್ಟಿ ( 15 ತಿಂಗಳು), ಗಂಗಮ್ಮ ಗಂಡ ದೇವಿಂದ್ರಪ್ಪ ಭಂಟನೂರ ( 48 ವರ್ಷ) ಒಟ್ಟು ನಾಲ್ಕು ಜನರು ಮೃತಪಟ್ಟಿರುತ್ತಾರೆ ಹಾಗೂ ಕಲಬುರಗಿ ನಗರದ ಜಿಮ್ಸ ಆಸ್ಪತ್ರೆಯಲ್ಲಿ 03 ಜನ, ಯುನೈಟೆಡ್ ಆಸ್ಪತ್ರೆಯಲ್ಲಿ 03 ಜನ, ಬಸವೇಶ್ವರ ಆಸ್ಪತ್ರೆಯಲ್ಲಿ 12 ಜನ, ಚಿರಾಯು ಆಸ್ಪತ್ರೆಯಲ್ಲಿ 02 ಜನ ಒಟ್ಟು 20 ಗಾಯಾಳುಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾನ್ಯ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಮೃತಪಟ್ಟ 04 ಜನ ಕುಟುಂಬಗಳಿಗೆ ಹಾಗೂ ಗಾಯಗೊಂಡ 20 ಜನ ಗಾಯಾಳುಗಳಿಗೆ ತುರ್ತಾಗಿ ಪರಿಹಾರ ನೀಡಲು ಪರಿಹಾರ ನಿಧಿ ಶಾಖೆಗೆ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.