ದೋರನಹಳ್ಳಿ ದುರಂತಃ ಸಾಂತ್ವನ ಹೇಳಿ ಪಕ್ಷದಿಂದ 1 ಲಕ್ಷ ರೂ. ನೀಡಿದ ಲಕ್ಷ್ಮಣ ಸವದಿ
ದೋರನಹಳ್ಳಿ ದುರಂತಃ ಬಿಜೆಪಿಯಿಂದ 1 ಲಕ್ಷ ರೂ.
ದೋರನಹಳ್ಳಿ ದುರಂತಃ ಬಿಜೆಪಿಯಿಂದ 1 ಲಕ್ಷ ರೂ.
ಮೃತ ಕುಟುಂಬಗಳಿಗೆ ಬಿಜೆಪಿಯಿಂದ ತಲಾ ಒಂದು ಲಕ್ಷ ರೂ.
yadgiri, ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿಯಲ್ಲಿ ಬೆಂದು ಅಸುನೀಗಿದ ಕುಟುಂಬಸ್ಥರಿಗೆ ಬಿಜೆಪಿಯಿಂದ ತಲಾ ಒಂದು ಲಕ್ಷ ರೂ. ಧನ ಸಹಾಯವನ್ನು ಪಕ್ಷದ ಮುಖಂಡ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀಡಿದರು.
ದೋರನಹಳ್ಳಿ ಗ್ರಾಮದ ಮೃತ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅವರು, ತಮ್ಮ ಪಕ್ಷ ಬಿಜೆಪಿಯಿಂದ ಒಂದು ಲಕ್ಷ ರೂ. ಪರಿಹಾರ ನೀಡಿದ್ದು, ಇಷ್ಟರಲ್ಲಿಯೇ ಸರ್ಕಾರ ಘೋಷಿಸಿದಂತೆ ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ, ಪರಿಹಾರ ಒದಗಿಸಲಾಗುವದು ಎಂದರು.
ಇದೇ ವೇಳೆ ಜೊತೆಯಲ್ಲಿದ್ದ ಸುರಪುರ ಶಾಸಕ ರಾಜೂಗೌಡ, ಮೃತ ಕುಟುಂಬಗಳಿಗೆ ವಯಕ್ತಿಕವಾಗಿ ತಲಾ 25 ಸಾವಿರ ರೂ.ಗಳನ್ನು ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಅಲ್ಲದೆ ಮೃತ ಕುಟುಂಬದ ಸಹಾಯ ಸಹಕಾರಕ್ಕೆ ಸರ್ಕಾರವಿದೆ ಯಾರೊಬ್ಬರು ಎದೆಗುಂದಬೇಡಿ ಎಂದು ಧೈರ್ಯ ತುಂಬಿದರು. ಇದೊಂದು ದೊಡ್ಡ ದುರಂತ ಬಂದದ್ದನ್ನು ನಿವಾರಿಸಕೊಂಡು ಮುಂದೆ ಸಾಗಬೇಕು. ದೃತಿಗೆಡಬಾರದೆಂದು ಎಂದು ಮೃತ ಕುಟುಂಬಸ್ಥರನ್ನು ಸಮಧಾನಿಸಿದರು.
ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಎಂಎಲ್ಸಿ ಬಿ.ಜಿ.ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳಿ ಇತರರಿದ್ದರು.