
ದಿನಕ್ಕೊಂದು ಕಥೆ
ದೇವರು ಮಾವುತನಲ್ಲೂ ಇದ್ದಾನೆ.
ಒಂದು ದಿನ, ಶಿಷ್ಯನೊಬ್ಬ ತನ್ನ ಗುರುವನ್ನು “ಗುರೂಜಿ, ದೇವರು ಎಲ್ಲಿದ್ದಾನೆ?” ಎಂದು ಪ್ರಶ್ನಿಸಿದ, ಅದಕ್ಕೆ ಪ್ರತಿಯಾಗಿ ಗುರು “ಎಲ್ಲೆಲ್ಲಿಯೂ ಇದ್ದಾನೆ. ಪ್ರತಿಯೊಬ್ಬರಲ್ಲಿಯೂ, ಪ್ರತಿ ವಸ್ತುವಿನಲ್ಲೂ ….” ಉತ್ತರಿಸಿದ.
ನಂತರ ಶಿಷ್ಯನು ತನ್ನ ಮನೆಗೆ ಹೋಗುತ್ತಿರಬೇಕಾದರೆ ಎದುರಿಗೆ ಅವನತ್ತಲೇ ಆನೆಯೊಂದು ಬರುತ್ತಿರುವುದು ಕಾಣಿಸಿತು.
“ದೂರ ಹೋಗು, ದೂರ ಹೋಗು… ಈ ಆನೆಗೆ ಹುಚ್ಚು ಹಿಡಿದಿದೆ” ಎಂದು ಮಾವುತ ಕಿರುಚಿದ. ಶಿಷ್ಯ ತನ್ನಲ್ಲೆ ಅಂದುಕೊಂಡ, “ಇಷ್ಟಕ್ಕೂ ಆನೆ ನನ್ನ ಮೇಲೇಕೆ ಎರಗುತ್ತಿದೆ.? ಅದರಲ್ಲೂ ದೇವರಿದ್ದಾನೆ. ನನ್ನಲ್ಲೂ ಸಹ” ದೇವರಿದ್ದಾನೆ. ಒಂದು ದೇವರು ಮತ್ತೊಂದು ದೇವರ ಮೇಲೆ ಎರಗಲು ಸಾಧ್ಯವಿಲ್ಲ. ಎಂದು ತಿಳಿದು ಆತ ತಾನು ನಿಂತ ಸ್ಥಳದಿಂದ ಅಲುಗಾಡಲಿಲ್ಲ.
ಆನೆ ಆತನನ್ನು ತನ್ನ ಸೊಂಡಿಲಿನಿಂದ ಎತ್ತಿ ದೂರ ಎಸೆಯಿತು. ಅದೃಷ್ಟಕ್ಕೆ ಶಿಷ್ಯನು ಒಂದು ಹುಲ್ಲಿನ ಬಣವೆಯ ಮೇಲೆ ಬಿದ್ದು ಗಾಯಗೊಂಡ.
ಗುರುವಿಗೆ ಈ ಸುದ್ದಿ ತಲುಪಿತು. ತಕ್ಷಣ ಆತ ತನ್ನ ಕೆಲವು ಶಿಷ್ಯರೊಡನೆ ಅವನ ಬಳಿ ಧಾವಿಸಿ ಬಂದು, ನರಳುತ್ತಾ ಮಲಗಿದ್ದ ಶಿಷ್ಯ ಗುರುವನ್ನು ಕೇಳಿದ. “ನೀವು ಹೇಳಿದ್ದಿರಿ, ದೇವರು ಎಲ್ಲದರಲ್ಲಿಯೂ ಇದ್ದಾನೆಂದು, ಆದಾಗ್ಯೂ ನನಗೆ ಆನೆ ಏಕೆ ಪೆಟ್ಟು ನೀಡಿತ್ತು.?” ಎಂದು ಕೇಳಿದ ಶಿಷ್ಯ.
“ನಿಜ, ದೇವರು ಎಲ್ಲದರಲ್ಲೂ ಇದ್ದಾನೆ. ದೇವರು ಮಾವುತನಲ್ಲೂ ಇದ್ದಾನೆ. ಹಾದಿಯಿಂದ ದೂರ ಸರಿ ಎಂದು ಆತ ಹೇಳುತ್ತಲೇ ಇದ್ದ. ನೀನೇಕೆ ಅವನ ಮಾತು ಕೇಳಲಿಲ್ಲ?” ಎಂದ ಗುರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.