ಗಂಗನಾಳದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ
ಒಟ್ಟು 61 ಅರ್ಜಿಗಳು ಸ್ವೀಕಾರ. 26 ಅರ್ಜಿ ವಿಲೇವಾರಿ, 35 ಅರ್ಜಿ ಬಾಕಿ
ಸಂಧ್ಯಾ ಸುರಕ್ಷತೆ, ವಿಧವಾ ವೇತನದ 21 ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಪರಿಹಾರ
yadgiri, ಶಹಾಪುರಃ ಗ್ರಾಮ ವ್ಯಾಪ್ತಿಯ ಕಂದಾಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯ ಸಮಸ್ಯೆಗಳು ಕುರಿತು ಅರ್ಜಿ ಸಲ್ಲಿಸಿದಲ್ಲಿ ಶೀಘ್ರದಲ್ಲಿ ಅದನ್ನು ಪರಿಹರಿಸುವ ಕಾರ್ಯಕೈಗೆತ್ತಿಕೊಳ್ಳಲಾಗುವದು ಎಂದು ತಹಸೀಲ್ದಾರ ಮಧುರಾಜ ಕೂಡ್ಲಿಗಿ ತಿಳಿಸಿದರು.
ತಾಲೂಕಿನ ಗಂಗನಾಳ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಸ್ಥರ ಸಾರ್ವಜನಿಕ ಅಥವಾ ಯಾವುದೇ ಇಲಾಖೆಯ ಸಮಸ್ಯೆಗಳಿದ್ದಲ್ಲಿ ಸಮರ್ಪಕ ಮಾಹಿತಿಯೊಂದಿಗೆ ಸರ್ಜಿ ಸಲ್ಲಿಸಿ, ಅದನ್ನು ಆಯಾ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ವಿಲೇವಾರಿ ಮಾಡುವ ಮೂಲಕ ಅದನ್ನು ಶೀಘ್ರ ಪರಿಹರಿಸಿ ಕೊಡಲಾಗುವದು. ಕೆಲವೊಂದು ಸಮಸ್ಯೆಗಳಿ ಸ್ಥಳದಲ್ಲಿಯೇ ಇತ್ಯರ್ಥವಾಗವಂತಿದ್ದರೆ ಇಲ್ಲಿಯೇ ಸೂಕ್ತ ಪರಿಹಾರ ಒದಗಿಸಲಾಗುವುದು. ಈ ಕಾರ್ಯಕ್ರಮ ಸದುಪಯೋಗ ಪಡೆಯಬೇಕೆಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸುಮಾರು 61 ಅರ್ಜಿಗಳು ಸ್ವೀಕರಿಸಲಾಯಿತು. ಇದರಲ್ಲಿ 26 ಅರ್ಜಿಗಳು ಸಂಬಂಧಪಟ್ಟ ಆಯಾ ಇಲಾಖೆಗೆ ವಿಲೇವಾರಿ ಮಾಡಲಾಯಿತು. ಬಾಕಿ ಉಳಿದ 36 ಅರ್ಜಿಗಳು ಪರಿಶೀಲಿಸಿ ಸಮರ್ಪಕ ಪರಿಹಾರ ಕಲ್ಪಿಸಲಾಗುವುದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಸ್ಥಳದಲ್ಲಿಯೆ ಸಂಧ್ಯಾ ಸುರಕ್ಷ, ವಿಧವಾ ವೇತನದ 21 ಫಲಾನುಭವಿಗಳಿಗೆ ಮಂಜುರಾತಿ ನೀಡಲಾಯಿತು.
ಗ್ರಾಪಂ ಅಧ್ಯಕ್ಷ ಅಂಬಲಮ್ಮ, ಉಪಾಧ್ಯಕ್ಷ ಸಣ್ಣ ಭೀಮನಗೌಡ ಬಿರಾದಾರ, ಗ್ರೇಡ್ 2 ತಹಸೀಲ್ದಾರ ಸೇತುಮಾಧವ, ಸಮಾಜ ಕಲ್ಯಾಣ ಇಲಾಕೆ ಅಧಿಕಾರಿ ರಾವುತಪ್ಪ ಹವಲ್ದಾರ, ಸಿಪಿಐ ಚನ್ನಯ್ಯ ಹಿರೇಮಠ, ಪಶುಸಂಗೋಪನೆಯ ಎಡಿ ಡಾ.ಷಣ್ಮುಖಪ್ಪ, ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಕುಮಾರ, ಸಿಡಿಪಿಓ ಗುರುರಾಜ್, ಜೆಸ್ಕಾಂ ಎಇಇ ಶಾಂತಪ್ಪ ಪೂಜಾರಿ, ಬಿಇಓ ರುದ್ರಗೌಡ ಪಾಟೀಲ್, ಪಿಎಸ್‍ಐ ಅಯ್ಯಪ್ಪ, ಸರ್ವೇ ಇಲಾಖೆಯ ವೆಂಕಟೇಶ, ಕಂದಾಯ ಇಲಾಖೆಯ ನಿರೀಕ್ಷಕ ಗಿರೀಶ್, ದೇವರಾಜ ಸೇರಿದಂತೆ ಇತರರು ಇದ್ದರು.